Breaking News

ಒಮಿಕ್ರಾನ್ : ತಜ್ಞರ ಜೊತೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ. ರಾಜ್ಯದ ಮುಂದಿನ ದಿನಗಳನ್ನು ನಿರ್ಧರಿಸಲಿದಯಾ ಸಭೆ ??

Cnewstv.in / 03.12.2021/ ಬೆಂಗಳೂರು/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಒಮಿಕ್ರಾನ್ : ತಜ್ಞರ ಜೊತೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ. ರಾಜ್ಯದ ಮುಂದಿನ ದಿನಗಳನ್ನು ನಿರ್ಧರಿಸಲಿದಯಾ ಸಭೆ ??

ಬೆಂಗಳೂರು : ಕೊರೊನಾ ರೂಪಾಂತರ ವೈರಸ್ ಈಗಾಗಲೆ ಹಲವು ದೇಶಗಳಲ್ಲಿ ಕಾಣಿಸಿಕೊಂಡಿದೆ. ಭಾರತದಲ್ಲೂ ಸಹ ಈ ವೈರಸ್ ಕಾಣಿಸಿಕೊಳ್ಳದಂತೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿತ್ತು ಆದರೂ ಸಹ ಇಬ್ಬರಲ್ಲಿ ಈ ವೈರಸ್ ಪತ್ತೆಯಾಗಿದೆ.

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಪ್ರಯಾಣಿಸಿದ ಇಬ್ಬರಲ್ಲಿ ಮೊದಲಬಾರಿಗೆ ಈ ಒಮಿಕ್ರಾನ್ ವೈರಸ್ ಕಾಣಿಸಿಕೊಂಡಿದೆ. ಅವರ ಸಂಪರ್ಕದಲ್ಲಿದ್ದ ಐವರಿಗೂ ಸಹ ಪಾಸಿಟಿವ್ ವರದಿಯಾಗಿದೆ. ಒಮಿಕ್ರಾನ್ ಸೋಂಕು ಮತಷ್ಟು ಹರಡುವುದನ್ನು ತಡೆಗಟ್ಟುವುದಕ್ಕಾಗಿ ಇಂದು ಮಧ್ಯಾಹ್ನ 1 ಗಂಟೆಗೆ ಸಿಎಂ ಬೊಮ್ಮಾಯಿ ತಜ್ಞರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಒಮಿಕ್ರಾನ್ ಹೆಚ್ಚಿರುವ ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ನಿಷೇಧ ಹೇರುವ ಸಲುವಾಗಿ ವಿಮಾನಯಾನ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ನಿನ್ನೆ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಚರ್ಚೆ ನಡೆಸಿದ್ದಾರೆ.

ಒಟ್ಟಿನಲ್ಲಿ ಇಂದು ಮಧ್ಯಾಹ್ನ ನಡೆಯಲಿರುವ ಸಭೆಯು ರಾಜ್ಯದ ಮುಂದಿನ ದಿನಗಳನ್ನು ನಿರ್ಧರಿಸಲಿದೆ.‌ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಅನಿವಾರ್ಯವೇ ಅಥವಾ ಟಫ್ ರೂಲ್ಸ್ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನು ಒದಿ : https://cnewstv.in/?p=7018

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*