Cnewstv.in / 03.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ಶವ
ಶಿವಮೊಗ್ಗ : ಶಿವಮೊಗ-ಭದ್ರಾವತಿ ರೈಲ್ವೇ ನಿಲ್ದಾಣಗಳ ಮಧ್ಯೆ ರೈಲ್ವೇ ಕಿ.ಮೀ ನಂ-52/100 ರಲ್ಲಿ ಸುಮಾರು 55 ರಿಂದ 60 ವರ್ಷದ ವೃದ್ದರೋರ್ವರು ಮೃತಪಟ್ಟಿದ್ದು ವಾರಸುದಾರರಿಲ್ಲದ ಈ ಅಪರಿಚಿತ ವ್ಯಕ್ತಿಯ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ.
ಮೃತ ವ್ಯಕ್ತಿಯು ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಎತ್ತರ ಸುಮಾರು 5.6 ಅಡಿ, ಬೋಳು ತಲೆ, 1/2 ಇಂಚು ಬಿಳಿ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಬಲಗೈಯಲ್ಲಿ ಶಿವನ ಮೂರ್ತಿಯ ಹಚ್ಚೆಯ ಗುರುತು ಇರುತ್ತದೆ, ಒಂದು ಕಡು ನೀಲಿ ಮತ್ತು ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಬನಿಯನ್, ಕಡು ನೀಲಿ ಬಣ್ಣದ ಪ್ಯಾಂಟ್, ಕಾಫಿ ಬಣ್ಣದ ಅಂಡರ್ ವೇರ್, ಕಪ್ಪು ಬಣ್ಣದ ಉಡುದಾರ, ನೀಲಿ ಬಣ್ಣದ ಬೆಲ್ಟ್ ಹಾಗೂ ಪ್ಯಾರಾಗಾನ್ ಚಪ್ಪಲಿ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್-ಇನ್ಸಪೆಕ್ಟರ್ ಅಥವಾ ದೂರವಾಣಿ ಸಂಖ್ಯೆ 08182-222974 ಮತ್ತು ಮೊ.ನಂ.94808-02124 ಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ
ಇದನ್ನು ಒದಿ : https://cnewstv.in/?p=7011
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

C News TV Kannada News Online in cnewstv