Cnewstv.in / 2.12.2021/ ಮೈಸೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಜಾಮೀನಿನ ಮೇಲೆ ಹೊರಬಂದು, ಕುಡಿದ ಮತ್ತಿನಲ್ಲಿ ಮತ್ತೆ ಕೊಲೆ ಮಾಡಿದ ಅಸಾಮಿ.
ಮೈಸೂರು : ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವನು ಮಹಿಳೆಯನ್ನು ಕೊಲೆ ಮಾಡಿ, ಗರ್ಭಿಣಿ ಹೆಂಡತಿ ಸೇರಿದಂತೆ ಆರು ಜನರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ನವಿಲೂರು ಎಂಬ ಗ್ರಾಮದ ಈರಯ್ಯ ಎಂಬುವವನು ಲಿಂಗಮ್ಮ ಎನ್ನುವವರನ್ನು ಕೊಲೆ ಮಾಡಿದ್ದಾನೆ. ಇದನ್ನು ತಡೆಯಲು ಬಂದಂತಹ ತನ್ನ ಗರ್ಭಿಣಿ ಪತ್ನಿ ಅತ್ತೆ, ಮಾವ ಸೇರಿ ಒಟ್ಟು ಅರು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಾಯಾಳುಗಳು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲೆ ಮಾಡಿದ ಈರಯ್ಯ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿದ್ದ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಇದೀಗ ಮತ್ತೆ ಕೊಲೆ ಮಾಡಿದ್ದಾನೆ. ಘಟನಾಸ್ಥಳಕ್ಕೆ ಮೈಸೂರು ಎಸ್.ಪಿ. ಆರ್ ಚೇತನ್ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನು ಒದಿ : https://cnewstv.in/?p=7002
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

C News TV Kannada News Online in cnewstv