Cnewstv.in / 2.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ನಗರದಲ್ಲಿರುವ ಜಿಲ್ಲಾ ಆಸ್ಪತ್ರೆ ಆದ ಮೆಗ್ಗನ್ ಆಸ್ಪತ್ರೆಯಲ್ಲಿ ಸೀನಿಯರ್ ರೆಸಿಡೆಂಟ್ ಆಗಿ 9 ಜನ ವೈದ್ಯರು ತಮ್ಮ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಸೀನಿಯರ್ ರೆಸಿಡೆಂಟ್ ಒಬ್ಬರಿಗೆ 60 ಸಾವಿರ ರೂಪಾಯಿ ಸಂಬಳವಿರುತ್ತದೆ. 4 ತಿಂಗಳಿನಿಂದ ಸಂಬಳ ಬಂದಿರುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ರಿಸ್ಕ್ ಅಲೈನ್ಸ್ ಕೊಡುವುದಾಗಿ ಸರ್ಕಾರ ಫೋಷಣೆ ಮಾಡಿತ್ತು. ರಿಸ್ಕ್ ಅಲೈನ್ಸ್ ಎಂದರೆ ತಮ್ಮ ಜೀವಕ್ಕೆ ಯಾವುದೇ ರೀತಿ ಹಂಗು ಬಂದರು ಹೆದರದೆ ಮಾಡುವ ಕೆಲಸ. ಇಂಟರ್ನ್ ಮಾಡುತ್ತಿರುವ ವೈದ್ಯರು, ಪೋಷ್ಟ್ ಗ್ರಾಜುಯೇಷನ್ ಮಾಡುತ್ತಿರುವ ವೈದ್ಯರು, ಸೀನಿಯರ್ ರೆಸಿಡೆಂಟ್ ಇವರುಗಳು ಶಿವಮೊಗ್ಗ ನಗರದ ಮೆಗ್ಗನ್ ಆಸ್ಪತ್ರೆಯಲ್ಲಿ ಸುಮಾರು 150 ಜನ ವೈದ್ಯರು ಇರುತ್ತಾರೆ. ಇವರಿಗೆ 10 ಸಾವಿರ ರೂಪಾಯಿ ಪ್ರತಿ ತಿಂಗಳು ಕೊಡುವುದಾಗಿ ತಿಳಿಸಿದ್ದರು. ಇದೇ ರೀತಿ ಸುಮಾರು 6 ತಿಂಗಳಿನಿಂದ ಹಣ ಬಿಡುಗಡೆ ಆಗಿರುವುದಿಲ್ಲ.
ಪಿ.ಜಿ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ಆಗಿರುವುದಿಲ್ಲ ಇದರಿಂದ ಹೊಸದಾಗಿ ಪಿ.ಜಿ ವಿದ್ಯಾರ್ಥಿಗಳ ಸೇರ್ಪಡೆ ಕಾಲೇಜಿಗೆ ಆಗುತ್ತಿಲ್ಲ. ಇದರ ಪರಿಣಾಮ 2 ಮತ್ತು 3 ನೇ ವರ್ಷದ ಪಿ.ಜಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಬೀಳುತ್ತಾ ಇದ್ದೆ ಈಗಾಗಲೇ ಅನೇಕ ಪಿ.ಜಿ ವಿದ್ಯಾರ್ಥಿಗಳು ಕೋವಿಡ್ 1 ಮತ್ತು 2 ನೇ ಅಲೆಯಲ್ಲಿ ತಮ್ಮ ವೃತ್ತಿಯನ್ನ ಅಚ್ಚುಕಟ್ಟಾಗಿ ಮಾಡಿದ್ದು ಅನೇಕ ವಿದ್ಯಾರ್ಥಿಗಳು ಕೋವಿಡ್ ಗೆ ತುರ್ತಾದರು ಸಹ ಗುಣಮುಖರಾದ ಮೇಲೆ ಮತ್ತೆ ತಮ್ಮ ವೃತ್ತಿಯನ್ನು ಮುಂದುವರೆಸುಕೊಂಡು ಹೋಗಿರುವ ಸಂದರ್ಭವನ್ನು ನಾವೆಲ್ಲರು ನೋಡಿದ್ದೇವೆ.
ಪಿ.ಜಿ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ಏಕಾಏಕಿ ಕೋವಿಡ್ 1 ನೇ ಅಲೆಯಲ್ಲಿ 4 ಪಟ್ಟು ಹೆಚ್ಚಿಸಿರುವುದು ಕಂಡನಿಯ ಇದರಿಂದ ಬಡ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ ತತಕ್ಷಣ ಹಿಂಪಡೆಯಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತಿವೆ.
ಸರ್ಕಾರದಿಂದ ರಾಜ್ಯಾದ್ಯಂತ ಸರ್ಕಾರಿ ವೈದ್ಯಕಿಯ ಶಿಕ್ಷಣ ಸಂಸ್ಥೆಗಳಿಗೆ ಸುಮಾರು 73 ಕೋಟಿ ರೂಪಾಯಿ ಬಿಡುಗಡೆ ಆಗಬೇಕಾಗಿದೆ. ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಅನೇಕ ವೈದ್ಯಕಿಯ ವಿದ್ಯಾರ್ಥಿಗಳು ನಿರಂತರವಾಗಿ ಮುಷ್ಕರವನ್ನು ಮಾಡುತ್ತಿದ್ದಾರೆ ಪ್ರಪಂಚಾದ್ಯಂತ ಓಮಿಕ್ರಾನ್ ಎಂಬುವ ವೈರಸ್ ಅನೇಕ ರಾಷ್ಟಗಳಿಗೆ ಹರಡಿದೆ. ಈಗಾಗಲೇ ಅನೇಕ ರಾಷ್ಟಗಳು ಲಾಕ್ ಡೌನ್ ಮಾಡಿದ್ದಾರೆ. ಭಾರತದಲ್ಲೂ ಸಹ ಓಮಿಕ್ರಾನ್ ಎಂಬ ವೈರಸ್ ಕೆಲವು ಭಾಗದಲ್ಲಿ ಕಂಡುಕೊಂಡಿದೆ ಮುಷ್ಕರ ಮಾಡಿತ್ತಿರುವ ವೈದ್ಯರುಗಳನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಮುಷ್ಕರದಿಂದ ಆಸ್ಪತ್ರೆಯಲ್ಲಿ ರೋಗಿಗಳು ಸಹ ಪರದಾಡುತ್ತಿದ್ದಾರೆ, ವೈದ್ಯರು ತಾವು ಮಾಡಿರುವ ಸೇವೆಗೆ ಸರ್ಕಾರ ಕೊಟ್ಟಿರುವ ಬರವಸೆಯನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ ಕೋವಿಡ್ ಸಂದರ್ಭದಲ್ಲಿ ವೈದ್ಯರನ್ನು ದೇವರುಗಳು ಎಂದು ಹೇಳಿರುವ ರಾಜ್ಯ ಸರ್ಕಾರ ಇಂದಿನ ಸಂದರ್ಭ ನೋಡಿದರೆ ಈ ಎಲ್ಲಾ ಮಾತುಗಳು ನಾಟಕಿಯವೆನಿಸುತ್ತದೆ ಆದ್ದರಿಂದ ಕೂಡಲೆ ಸರ್ಕಾರ ವೈದ್ಯರ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ವೈದ್ಯರನ್ನು ಗೌರವದಿಂದ ಕಾಣಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿಯಾದ ಕೆ ದೇವೇಂದ್ರಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಪಿ ಗಿರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಕೆ ರಂಗನಾಥ್ ಅವರು, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ್ ರವರು, ಡಿಕೆ ಶಿವಕುಮಾರ್ ಅಭಿಮಾನಿ ಬಳಗ ಅಧ್ಯಕ್ಷರಾದ ಮೋಹನ್ ರವರು ಡಾಕ್ಟರ್ ದಿನೇಶ್, ಎಸ್ ಎಂ ಶರತ್ ರವರು ಹಾಗೂ ಇತರರು ಇದ್ದರು.
ಇದನ್ನು ಒದಿ : https://cnewstv.in/?p=6995
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments