Cnewstv.in / 1.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಕುವೆಂಪು ವಿಶ್ವವಿದ್ಯಾಲಯದ ಬಿ.ಎಡ್. ಕೋರ್ಸ್ಗೆ ಆನ್‌ಲೈನ್ ಪ್ರವೇಶಾತಿ ಮರು ಪ್ರಾರಂಭಿಸಿ : ಎನ್ ಎಸ್ ಯು ಐ
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ಬಿ.ಎಡ್. ಕೋರ್ಸ್ಗೆ ಆನ್‌ಲೈನ್ ಪ್ರವೇಶಾತಿ ಮರು ಪ್ರಾರಂಭಿಸಬೇಕು ಎಂದು ಎನ್ ಎಸ್ ಯು ಐ ವತಿಯಿಂದ ಮನವಿ ಸಲ್ಲಿಸಲಾಯಿತು.
ಕುವೆಂಪು ವಿಶ್ವವಿದ್ಯಾಲಯದ ಅಂತಿಮ ಪದವಿ ಪರೀಕ್ಷೆಗಳ ಫಲಿತಾಂಶಗಳು ನವೆಂಬರ್ 24 ರಂದು ರಾತ್ರಿ 9 ಘಂಟೆಗೆ ಪ್ರಕಟವಾಗಿದೆ. ಅಂತಿಮ ಪದವಿ ಪರೀಕ್ಷೆಗಳು ಬರೆದ ಸಾವಿರಾರು ವಿದ್ಯಾರ್ಥಿಗಳು ಬಿ.ಎಡ್. ಕೋರ್ಸ್ಗೆ ಪ್ರವೇಶವನ್ನು ಪಡೆಯಲು ಇಚ್ಚಿಸಿತ್ತಿದ್ದಾರೆ. ಆದರೆ ಕುವೆಂಪು ವಿಶ್ವವಿದ್ಯಾಲಯದ ಅಂತಿಮ ಪದವಿಯ ಪರೀಕ್ಷೆಗಳ ಫಲಿತಾಂಶಗಳು ವಿಳಂಬಾವಾದ ಕಾರಣ ಬಿ.ಎಡ್. ಕೋರ್ಸ್ಗೆ ಪ್ರವೇಶವನ್ನು ಪಡೆಯಲು ಆಗಿಲ್ಲ.
ಕುವೆಂಪು ವಿಶ್ವವಿದ್ಯಾಲಯದ ಬಿ.ಎಡ್. ಕೋರ್ಸ್ಗೆ ಆನ್‌ಲೈನ್ ಪ್ರವೇಶಾತಿಯ ಕೋನೆಯ ದಿನಾಂಕ ನವೆಂಬರ್ 26 ರಂದು ಕೊನೆಗೊಂಡಿರುತ್ತದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ಬಿ.ಎಡ್. ಕೋರ್ಸ್ನ್ನು ಒದುವ ಕನಸಿಗೆ ನೀರೆಚಿದಂತಾಗಿರುತ್ತದೆ.
ತಕ್ಷಣವೇ ಕುವೆಂಪು ವಿಶ್ವವಿದ್ಯಾಲಯದ ಬಿ.ಎಡ್. ಕೋರ್ಸ್ಗೆ ಆನ್‌ಲೈನ್ ಪ್ರವೇಶಾತಿಯನ್ನು ಮರು ಪ್ರಾರಂಭಿಸಬೇಕು ಎಂದು ಕೇಳಿಕೊಂಡರು.
ಈ ಸಂಧರ್ಭದಲ್ಲಿ ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಬಾಲಾಜಿ ಹೆಚ್, ಎಸ್, ಎನ್ ಎಸ್ ಯು ಐ ಕಾರ್ಯಧ್ಯಕ್ಷರು ರವಿ, ಎನ್.ಎಸ್,ಯು.ಐ ನ ನಗರಾಧ್ಯಾಕ್ಷರು ವಿಜಯ್, ಶಿವಕುಮಾರ್, ದರ್ಶನ್,ಅರುಣಾ,ಲತಾ,ಉಷಾ ಕುಸುಮಾ, ತುಂಗಾ ಇನ್ನಿತರರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=6968
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments