Cnewstv.in / 30.11.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ : ಜೈಲಿನ ಸಿಬ್ಬಂದಿ ಹಾಗೂ ಕೈದಿಗಳಿಗೆ ಶಾಕ್
ಬೆಂಗಳೂರು : ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜೈಲಿನಲ್ಲಿರುವ ಕೈದಿಗಳು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಇಂದು ದಾಳಿ ನಡೆಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ ಮೊಬೈಲ್, ಗಾಂಜಾ ಮುಂತಾದ ವಸ್ತುಗಳು ಪತ್ತೆಯಾಗಿದೆ. ಅಧಿಕಾರಿಗಳಿಂದ ಇನ್ನೂ ಕಾರ್ಯಚರಣೆ ಮುಂದುವರೆದಿದೆ.
ಇಂದು ಬೆಳಗ್ಗೆ ಆರು ಗಂಟೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ 2 ಡಿಸಿಪಿ, 15 ಇನ್ಸ್‌ಪೆಕ್ಟರ್ ಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಹಲವು ಗಾಂಜಾ ಪ್ಯಾಕೆಟ್‌ಗಳು ದೊರಕಿವೆ. ಈ ವೇಳೆ ಗಾಂಜಾ ಪ್ಯಾಕೇಟ್ ಸಿಕ್ಕಿದೆ. ಆರರಿಂದ ಏಳು ಗಾಂಜಾ ಪೈಪ್ ಗಳು ಸಿಕ್ಕಿವೆ. ಇನ್ನೂ ಕೂಡ ದಾಳಿ ಮುಂದುವರಿದಿದೆ. ನಂತರ ಏನೇನ್ ಸಿಕ್ಕಿದೆ ಎಂಬುದ ಮಾಹಿತಿ ಸಿಗಲಿದೆ ಎಂದು ಸಿಸಿಬಿ ಮುಖ್ಯಸ್ಥ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಇದನ್ನು ಒದಿ : https://cnewstv.in/?p=6955
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv