Breaking News

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Cnewstv.in / 17.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2021-22ನೇ ಸಾಳಿನ ಅಲ್ಪಸಂಖ್ಯಾತರ ಸಮುದಾಯದ ಕ್ರೈಸ್ತ, ಮುಸಲ್ಮಾನ, ಜೈನ್, ಆಂಗ್ಲೋಇಂಡಿಯನ್ಸ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದವರಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.
ನಿಗಮದಿಂದ ಶ್ರಮಶಕ್ತಿ ಸಾಲ ಯೋಜನೆ, ಕಿರುಸಾಲ ಯೋಜನೆ, ಗಂಗಾಕಲ್ಯಾಣ ಯೋಜನೆ, ಮೈಕ್ರೋ ಸಾಲಯೋಜನೆ(ಕೋ-19) ವೈಯುಕ್ತಿಕ ಮಹಿಳೆಯರಿಗೆ ಮಾತ್ರ, ಆಟೋರಿಕ್ಷಾ/ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಸಹಾಯಧನ ಯೋಜನೆಗಳಿಗೆ ಕರ್ನಾಟಕದ ರಾಜ್ಯದ ಖಾಯಂ ನಿವಾಸಿಗಳಾಗಿದ್ದು, ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರುವ 18 ರಿಂದ 55 ವಯೋಮಿತಿಯೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ.

ಶ್ರಮಶಕ್ತಿ/ವಾಹನ ಖರೀದಿ ಯೋಜನೆಗೆ ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ. 4.50 ಲಕ್ಷಗಳೊಳಗೆ ಇರಬೇಕು. ಗಂಗಾ ಕಲ್ಯಾಣ /ಕಿರುಸಾಲ ಯೋಜನೆಗೆ ಗ್ರಾಮೀಣ ಪ್ರದೇಶದವರಿಗೆ ಆದಾಯ ಮಿತಿ ರೂ. 96 ಸಾವಿರ ಹಾಗೂ ನಗರ ಪ್ರದೇಶದವರಿಗೆ ರೂ. 1.03 ಲಕ್ಷಗಳೊಳಗೆ ಇರಬೇಕು. ಅರ್ಜಿದಾರರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಾಸದ ದೃಢೀಕರಣ ಪತ್ರ ಮತ್ತು ಪಡಿತರ ಚೀಟಿ, ಐಎಫ್‍ಎಸ್‍ಸಿ ಕೊಡ್ ಹೊಂದಿರುವ ಬ್ಯಾಂಕ್ ಖಾತೆ ಪುಸ್ತಕದ ಪ್ರತಿಗಳೊಂದಿಗೆ ದಿ: 15/12/2021 ರೊಳಗಾಗಿ ಆನ್‍ಲೈನ್ www.kmdconline.karnataka.gov.in ರಲ್ಲಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-228262 ನ್ನು ಸಂಪರ್ಕಿಸುವುದು.

ಇದನ್ನು ಒದಿ : https://cnewstv.in/?p=6827

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*