Breaking News

ತ್ರಿಪುರಾ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಪ್ರತಿಭಟನೆ.

Cnewstv.in / 15.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ತ್ರಿಪುರಾ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಪ್ರತಿಭಟನೆ.

ಶಿವಮೊಗ್ಗ: ತ್ರಿಪುರಾ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಸುನ್ನಿಜಮಾಯತ್ ವುಲ್ ಉಲೇಮಾ ಕಮಿಟಿ ವತಿಯಿಂದ ಇಂದು ಈದ್ರಾ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಯಿತು.

ತ್ರಿಪುರಾದ ಅಗರ್ತಲಾ ಪ್ರದೇಶದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆದಿರುವುದು ಖಂಡನೀಯ. ಮನುಷ್ಯ ಕರನಾಗುತ್ತಿದ್ದಾನೆ. ಧರ್ಮಗಳು ಮನುಷ್ಯರನ್ನು ಒಳ್ಳೆಯ
ವರನ್ನಾಗಿ ಮಾಡಬೇಕು. ಆದರೆ, ಮಾನವ ಸಂಕುಚಿತ ಸರಪಳಿಗಳಿಂದ ಇವುಗಳನ್ನು ಕಟ್ಟಿಹಾಕಿರುವುದರಿಂದ ಇಂಥ ಸ್ವಾರ್ಥ ಕೃತ್ಯಗಳು ನಡೆಯುತ್ತವೆ. ಧರ್ಮಾಂಧರು ಸದ್ಭಾವನೆಗಳನ್ನೇ ಕ್ಷೀಣಿಸುತ್ತಿದ್ದಾರೆ.ದುರ್ಭಾವನೆಗಳು ಹೆಚ್ಚುತ್ತಿವೆ.

ಕೆಲವು ಮನೋವಿಕಾರವಿರುವ ಮನುಷ್ಯರು ಮಾತ್ರ ಇಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಆಘಾತಕಾರಿಯಾಗಿದೆ. ಧರ್ಮದ ಹೆಸರಲ್ಲಿ ಕೆಲವು ಕಿಡಿಗೇಡಿಗಳು ಜಾತಿಯ ವಿಷದ ಬೀಜವನ್ನು ಬಿತ್ತಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಇನ್ಸಾಲ್ ಹಬೀಬ್ ಸೇಟ್, ಅಬ್ದುಲ್ ಸತ್ತಾರ್, ಏಜಾಜ್ ಪಾಷಾ, ಅಫ್ತಾಬ್ ಫರ್ವೀಜ್, ಮುನಾವರ್ ಪಾಷಾ, ಅನ್ವರ್ ಅಹಮ್ಮದ್, ಮುಷ್ಠಿ ಅಕಿಲ್ ರಾಜ್, ಖಾಜಿ ಅಶ್ರಫ್ ಸಾಬ್ ಸೇರಿದಂತೆ ಅಪಾರ ಜನ ಭಾಗವಹಿಸಿದ್ದರು.

ಇದನ್ನು ಒದಿ : https://cnewstv.in/?p=6809

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*