Breaking News

ರಸ್ತೆಯಲ್ಲಿ ದಿಢೀರ್ ಉರುಳುಸೇವೆ.‌

Cnewstv.in / 10.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಲಕ್ಷ್ಮಿ ಚಿತ್ರಮಂದಿರದ ಎದುರು ದಲಿತ ಕ್ರಿಯಾ ಸಮಿತಿ ಕಾರ್ಯಕರ್ತರು ದಿಢೀರ್‌ ಉರುಳುಸೇವೆ ಮಾಡಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.

ಲಕ್ಷ್ಮಿ ಚಿತ್ರಮಂದಿರದ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದರಿಂದಾಗಿ ಆ ಭಾಗದಲ್ಲಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು. ಹೀಗಾಗಿ ಮಹಾನಗರ ಪಾಲಿಕೆ ಕಳೆದ ಹದಿನೈದು ವರ್ಷಗಳಿಂದ ಆ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಗುರುತಿಸಿ ಪಟ್ಟಿ ಮಾಡಿ, ವಿನೋಬನಗರದ ಶಿವಾಲಯ ದೇವಾಲಯದ ಪಕ್ಕದಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಿ ಹಂಚುವುದಾಗಿ ತಿಳಿಸಲಾಗಿತ್ತು. ಆದರೆ ಹಂಚಿಕೆಯಲ್ಲಿ ಲೋಪವಾಗಿದೆ ಎಂಬ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿತ್ತು.

ಆದರೆ ಈಗ ಮತ್ತೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ಆರಂಭವಾಗಿದೆ ಲಕ್ಷ್ಮಿ ಚಿತ್ರಮಂದಿರದ ಸುತ್ತಮುತ್ತಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಅಲ್ಲಿ ವ್ಯಾಪಾರ ಮಾಡದಂತೆ ಆದೇಶವನ್ನು ನೀಡಲಾಗಿದೆ.‌ ಈ ಆದೇಶದಿಂದ ಕೋಪಗೊಂಡ ವ್ಯಾಪಾರಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಿಂದಾಗಿ 20 ನಿಮಿಷಗಳ ಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಅಧಿಕಾರಿಗಳು ಸ್ಥಳಕ್ಕೆ ಕೂಡಲೇ ಬರಬೇಕು. ಮಳಿಗೆಗಳನ್ನು ಅರ್ಹರಿಗೆ ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯ ನೇತೃತ್ವವನ್ನು ಸಮಿತಿ ಅಧ್ಯಕ್ಷರಾದ ವಿ. ಭಗವನ್ ವಹಿಸಿದ್ದರು.‌ ಪ್ರತಿಭಟನೆಯಲ್ಲಿ ಮದನ್, ಚಂದ್ರು, ಮಂಜುನಾಥ್, ರತ್ನ ಯಶೋದಮ್ಮ, ಮೊದಲಾದವರು ಇದ್ದರು

ಇದನ್ನು ಒದಿ : https://cnewstv.in/?p=6748

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*