Cnewstv.in / 9.11.2021/ ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರು : ನಟ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಅಕ್ಟೋಬರ್ 21 ರಂದು ನಿಧನರಾದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿದ ಹಿನ್ನೆಲೆ ದೊಡ್ಮನೆಯಿಂದ ಇಂದು ಅನ್ನಸಂತರ್ಪಣೆಗೆ ಆಯೋಜನೆ ಮಾಡಲಾಗಿತ್ತು.
ದಿವಗಂತ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ, ಅಭಿಮಾನಿಗಳಿಗೆ ಊಟ ಬಡಿಸಿದರು. ನಂತರ ಶಿವರಾಜಕುಮಾರ ರಾಘವೇಂದ್ರ ರಾಜಕುಮಾರ ಎಲ್ಲಾ ಅಭಿಮಾನಿಗಳಿಗೆ ಊಟ ಬಡಿಸಿದರು. ಊಟ ಬಡಿಸುವಾಗ ರಾಜಕುಟುಂಬ ಭಾವುಕರಾದರು.
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಭಿಮಾನಿಗಳು, ಗಣ್ಯರಿಗೆ ಅನ್ನಸಂತರ್ಪಣೆಗೆ ಆಯೋಜನೆ ಮಾಡಲಾಗಿತ್ತು. ಇಂದು ಬೆಳಿಗ್ಗೆ 11 ಗಂಟೆಯಿಂದಲೇ ಅನ್ನಸಂತರ್ಪಣೆ ಆರಂಭವಾಗಿತ್ತು.
ಒಂದು ಬಾರಿಗೆ 5 ಸಾವಿರ ಜನರಿಗೆ ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. 4 ಸಾವಿರ ಮಾಂಸಾಹಾರಿ, 1 ಸಾವಿರ ಸಸ್ಯಾಹಾರಿ ಕೌಂಟರ್ ಗಳನ್ನ ಸಿದ್ಧಪಡಸಿಲಾಗಿದೆ. 24 ರೋಗಳಲ್ಲಿ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದ್ದು, 2 ಗೇಟ್ ಗಳಲ್ಲಿ 5 ಸಾವಿರ ಕುರ್ಚಿ, ಟೇಬಲ್ ಹಾಕಲಾಗಿದೆ.
ಇದನ್ನು ಒದಿ : https://cnewstv.in/?p=6743
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv