Breaking News

ಹುಲಿ-ಸಿಂಹಧಾಮ ಕ್ಕೆ ಆಗಮಿಸಿದ ನೂತನ ಅತಿಥಿ ನೀರುಕುದುರೆ.

Cnewstv.in / 7.11.2021/ ಶಿವಮೊಗ್ಗ/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಶಿವಮೊಗ್ಗದ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾದ ತಾವರೆಕೊಪ್ಪದ ಹುಲಿ-ಸಿಂಹಧಾಮಗೆ ನೂತನ ಅತಿಥಿ ನೀರುಕುದುರೆ ಆಗಮಿಸಿದೆ.

ಮೈಸೂರು ಮೃಗಾಲಯದಿಂದ ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ಗಂಡು ನೀರು ಕುದುರೆಯನ್ನು ಉಡುಗೊರೆಯಾಗಿ ನೀಡಲಾಗಿದೆ. ಕಳೆದ ಮೂರು ದಿನಗಳ ಹಿಂದೆಯೇ ಶಿವಮೊಗ್ಗಕ್ಕೆ ನೀರು ಕುದುರೆಯನ್ನು ತರಲಾಗಿತ್ತು.‌ ಅದರೆ ಅದು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲಿ ಎಂಬ ಉದ್ದೇಶದಿಂದ ಎರಡು ದಿನಗಳ ಕಾಲ ನೀರು ಕುದುರೆಯನ್ನು ಕ್ವಾರೈಂಟೈನಲ್ಲಿ ಇಡಲಾಗಿತ್ತು. ಅದು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಶೀಘ್ರವೇ ಮತ್ತೊಂದು ನೀರುಕುದುರೆ ಸಫಾರಿಗೆ.

ಶಿವಮೊಗ್ಗ ಸಫಾರಿಗೆ ಅನುಕೂಲವಾಗುವಂತೆ ಈಗ ಮೊದಲ ಹಂತದಲ್ಲಿ ಒಂದು ಗಂಡು ಕುದುರೆಯನ್ನು ಮೈಸೂರು ಮೃಗಾಲಯ ಉಡುಗೊರೆಯಾಗಿ ನೀಡಿದ್ದು ಶೀಘ್ರದಲ್ಲಿಯೇ ಮತ್ತೊಂದು ಹೆಣ್ಣು ನೀರು ಕುದುರೆಯನ್ನು ಶಿವಮೊಗ್ಗ ಹುಲಿ-ಸಿಂಹಧಾಮಕ್ಕೆ ಉಡುಗೊರೆಯಾಗಿ ನೀಡಲಾಗುವುದು ಎಂದು ತಿಳಿಸಲಾಗಿದೆ.

ಒಟ್ಟಿನಲ್ಲಿ ಶಿವಮೊಗ್ಗದ ಸಫಾರಿಗೆ ಆಗಮಿಸಿರುವ ನೂತನ ಅತಿಥಿ‌ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಇದನ್ನು ಒದಿ : https://cnewstv.in/?p=6720

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*