Cnewstv.in / 5.11.2021/ ಶಿವಮೊಗ್ಗ/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಅಡುಗೆ ಅನಿಲ, ತೈಲೋತ್ಪನ್ನಗಳ ಬೆಲೆ ದಿನೇದಿನೇ ಏರಿಕೆಯಾಗುತ್ತಿದ್ದು ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಬೆನ್ನಲ್ಲೆ ತೈಲೋತ್ಪನ್ನಗಳ ಮೇಲಿನ ತೆರಿಗೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕಡಿತಗೊಳಿಸಿದೆ.
ತೆರಿಗೆ ಕಡಿತದಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ದರದ ಮೇಲೆ ಒಟ್ಟು 13 ರೂಪಾಯಿ ಇಳಿಕೆಯಾಗಿದೆ.ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 102 ರೂಪಾಯಿಗಳಾಗಿದೆ.
ತೆರಿಗೆ ಕಡಿತದಿಂದಾಗಿ ಪ್ರತಿ ಡೀಸೆಲ್ ದರದಲ್ಲಿ ಒಟ್ಟು 19 ರೂಪಾಯಿ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಒಂದು ಲೀಟರ್ ಡೀಸೆಲ್ 86 ರೂಪಾಯಿಗೆ ತಲುಪಿದೆ.
ಪ್ರತಿ ಲೀಟರ್ ಪೆಟ್ರೋಲ್ ಗೆ 7 ರೂಪಾಯಿ 11 ಪೈಸೆ, ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ ಕೇಂದ್ರ ಸರ್ಕಾರ 12 ರೂಪಾಯಿ ಮತ್ತು ರಾಜ್ಯ ಸರ್ಕಾರ 7 ರೂಪಾಯಿ ತೆರಿಗೆಯನ್ನು ಕಡಿತಗೊಳಿಸಿದೆ.
ಇದನ್ನು ಒದಿ : https://cnewstv.in/?p=6708
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments