Breaking News

“ಪುನೀತ್ ರಾಜಕುಮಾರ್ ರಸ್ತೆ” : ಪುನೀತ್ ಸ್ಮರಣಾರ್ಥ, ರಸ್ತೆಗೆ ಹೆಸರಿಟ್ಟ ಅಭಿಮಾನಿ ದೇವರುಗಳು.

Cnewstv.in / 1.11.2021/ ಶಿವಮೊಗ್ಗ/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವವಮೊಗ್ಗ : ಹೃದಯಾಘಾತದಿಂದ ಮೃತಪಟ್ಟ ನಟ ಪುನೀತ್ ರಾಜಕುಮಾರ್ ಕನ್ನಡ ಸಂಸ್ಕೃತಿಕ ಲೋಕದ ರಾಯಭಾರಿಯಾಗಿದ್ದರು. ಕೇವಲ ನಟನೆಯಿಂದ ಮಾತ್ರವಲ್ಲದೇ ಸಮಾಜಮುಖೀ ಕಾರ್ಯಗಳಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಜನರಿಗೆ ಸ್ಫೂರ್ತಿಯಾಗಿದ್ದರು. ಇಂತಹ ತಮ್ಮ ನೆಚ್ಚಿನ ನಾಯಕನ ಹೆಸರನ್ನು ನಗರದ ಪ್ರಮುಖ ರಸ್ತೆಗೆ ಅಭಿಮಾನಿಗಳು ಇಟ್ಟಿದ್ದಾರೆ.

ನಗರದ ಮಧ್ಯಭಾಗದಲ್ಲಿರುವ ಸಾವಿರಾರು ಜನವಾಸಿಗಳಿರುವ 1ಕಿ,ಮೀ ಉದ್ದದ ಲಕ್ಷ್ಮೀ ಟಾಕೀಸ್ ಹತ್ತಿರದ ಚಾನೆಲ್ ರಸ್ತೆಗೆ “ಪುನೀತ್ ರಾಜಕುಮಾರ್ ರಸ್ತೆ” ಎಂದು ಅಭಿಮಾನಿಗಳು ನಾಮಕರಣಗೊಳಿಸುವ ಮೂಲಕ ತಮ್ಮ ಅಭಿಮಾನವನ್ನು ಎತ್ತಿ ಹಿಡಿದಿದ್ದಾರೆ.

ಇದುವರೆಗೂ ಅನಾಮಧೆಯವಾಗಿ ಹಲವು ಹೆಸರುಗಳಿಂದ ಕರೆಯಲಾಗುತ್ತಿದ್ದ ಸುಮಾರು ಒಂದು ಕಿ.ಮೀ ಉದ್ದದ ರಸ್ತೆಗೆ ಸಾರ್ವಜನಿಕರೇ ಖುದ್ದು ಸೇರಿ ಯಾವುದೇ ರಾಜಕೀಯ ಬೆರೆಸದೆ ದೊಡ್ಡದೊಂದು ಶಾಶ್ವತವಾದ “ಪುನೀತ್ ರಾಜಕುಮಾರ್ ರಸ್ತೆ” ಎಂದು ನಾಮ ಫಲಕವನ್ನು ಸ್ಥಾಪಿಸಿ ಉದ್ಘಾಟಿಸಿದ್ದಾರೆ.

“ಪುನೀತ್ ರಾಜಕುಮಾರ್ ರಸ್ತೆ” ಎಂಬ ಹೆಸರನ್ನು ಮಹಾನಾಗರ ಪಾಲಿಕೆಗೆ ಅಧಿಕೃತಗೊಳಿಸಲು ಅಭಿಮಾನಿಗಳ ಒತ್ತಾಯಿಸಿದ್ದಾರೆ.

ಇದನ್ನು ಒದಿ : https://cnewstv.in/?p=6697

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*