Breaking News

ಎಸ್.ಡಿ‌.ಪಿ.ಐ ಜಿಲ್ಲಾ ಕಛೇರಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವ.

Cnewstv.in / 1.11.2021/ ಶಿವಮೊಗ್ಗ/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್.ಡಿ.ಪಿ.ಐ ಶಿವಮೊಗ್ಗ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಇಮ್ರಾನ್ ಕನ್ನಡ ಧ್ವರೋಹಣ ಮಾಡಿ ನಾಡಗೀತೆ ಹಾಡುವ ಮೂಲಕ 66ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ನಂತರ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ ಅವರು, ನಾವು ಕನ್ನಡಿಗರು ಎಂಬ ಹೆಮ್ಮೆ ಇರಲಿ, ನಮ್ಮ ಕರ್ನಾಟಕದ ಭಾಷೆ ಕನ್ನಡ ಇದನ್ನು “ಒಂದ ದೇಶ ಒಂದು ಭಾಷೆ” ಎಂದು ಹಿಂದಿ ಹೆರಿಕೆ ಮಾಡಲು ಪ್ರತ್ನಿಸುತ್ತಿರುವ ಸರ್ಕಾರ ಕನ್ನಡ ವಿರೋಧಿ ಸರ್ಕಾರವಾಗಿದೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಂದು ಕರ್ನಾಟಕದ ಜನತೆ ಕನ್ನಡದಿಂದ ದೂರವಿಡಲು ಪ್ರಯತ್ನ ನಡೆಯುತ್ತಿದೆ ಇದು ಖಂಡನೀಯ, ಕನ್ನಡವನ್ನು ಉಳಿಸಲು ಹೋರಾಟಗಳು ಅಗತ್ಯ ಎಂದು ಹೇಳಿದರು.

ನಂತರ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುಜೀಬ್ ಕನ್ನಡ ಭಾಷೆಯನ್ನು ಉಳಿಸಲು ಸರ್ವ ಕನ್ನಡಿಗರು ಒಂದಾಗಬೇಕಾಗಿದೆ, ನಾವು ಕೇವಲ ನವೆಂಬರ್ ತಿಂಗಳಲ್ಲಿ ಕನ್ನಡಿಗರು ಆಗಬಾರದು ಬದಲಾಗಿ ವರ್ಷದ 12 ತಿಂಗಳು ಕೂಡ ಕನ್ನಡಿಗರಾಗಬೇಕಾಗಿದೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ಜನತೆಗಾಗಿ ಹೋರಾಟ ನಡೆಸುವ ಪಕ್ಷವಾಗಿದೆ ಎಂದರು.

ಇದನ್ನು ಒದಿ : https://cnewstv.in/?p=6691

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*