Breaking News

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ.

Cnewstv.in /26.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : 2021-22 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್‍ನಂತರದ(ವೃತ್ತಿಪರ/ಸ್ನಾತಕೋತ್ತರ) ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕಿನ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಡಿಗ್ರಿ ಕೋರ್ಸ್ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿಯಿರುವ ಸೀಟುಗಳ ವಿವರವನ್ನು ವಿದ್ಯಾರ್ಥಿ ನಿಲಯ ಮತ್ತು ತಾಲ್ಲೂಕು ವಿಸ್ತರಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಅ.26 ರಿಂದ ಅರ್ಜಿ ಸಲ್ಲಿಕೆ ಅವಧಿ ಆರಂಭವಾಗಿದ್ದು ನವೆಂಬರ್ 15 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.

ಖಾಲಿ ಇರುವ ಸೀಟುಗಳ ವಿವರ : ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಮೆಟ್ರಿಕ್ ನಂತರ ಲಷ್ಕರ್ ಮೊಹಲ್ಲಾ ಶಿವಮೊಗ್ಗ ಮುಸ್ಲಿಂ- 10, ಜೈನ್-05, ಕ್ರಿಶ್ಚಿಯನ್-02, 2ಎ-02, 3ಬಿ-05, 3ಎ-04 ಲಭ್ಯವಿರುತ್ತದೆ. ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯ, ವೃತ್ತಿಪರ ಲಷ್ಕರ್ ಮೊಹಲ್ಲಾ ಶಿವಮೊಗ್ಗ ಜೈನ್-04, 2ಎ-03, 3ಎ-01 ಲಭ್ಯವಿರುತ್ತದೆ. ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಶಿವಮೊಗ್ಗ ಮೆಟ್ರಿಕ್ ನಂತರದ ಮುಸ್ಲಿಂ-08, ಜೈನ್-05, 2ಎ-02 ಇರುತ್ತದೆ.

ಅಲ್ಪಸಂಖ್ಯಾತರ ಸ್ನಾತಕೋತ್ತರ ಬಾಲಕಿಯರ ವಿದ್ಯಾರ್ಥಿನಿಲಯ ಶಂಕರಘಟ್ಟ ಭದ್ರಾವತಿ, ಸ್ನಾತಕೋತ್ತರ ಮುಸ್ಲಿಂ-10, ಜೈನ್-03, ಕ್ರಿಶ್ಚಿಯನ್-09(ಎಸ್‍ಟಿ-02, ಎಸ್‍ಸಿ-02, ಪ್ರವರ್ಗ1-03, 2ಎ-10, 3ಬಿ-08) ಲಭ್ಯವಿರುತ್ತದೆ. ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ ಬೊಮ್ಮನಕಟ್ಟೆ, ಭದ್ರಾವತಿ ಮೆಟ್ರಿಕ್ ನಂತರದ ಮುಸ್ಲಿಂ-11, ಕ್ರಿಶ್ಚಿಯನ್-01(ಎಸ್‍ಟಿ-01, ಪ್ರವರ್ಗ1-01, 2ಎ-07, 3ಎ-02, 3ಬಿ-01) ಸೀಟುಗಳು ಲಭ್ಯವಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ವಿಸ್ತರಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪ ವಿಭಾಗ ಶಿವಮೊಗ್ಗದ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=6605

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*