Cnewstv.in /26.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ತೀರ್ಥಹಳ್ಳಿ ಮತ್ತು ಹೊಸನಗರದಲ್ಲಿ ಪ್ರತಿಭಾವಂತ ಯುವ ಕಲಾವಿದರು ಮತ್ತು ತಂತ್ರಜ್ಞರು ಕಲಾಸಕ್ತರನ್ನು ಭೇಟಿಮಾಡಲು ಸತ್ಯ ಪಿಚ್ಚರ್ಸ್ ನ ಟೀಮ್ ಮಲೆನಾಡಿನ ಭಾಗಗಳಲ್ಲಿ ಹೋಗಿ ಯುವ ಕಲಾವಿದರನ್ನು ಪ್ರೋತ್ಸಾಹಿಸಿ ಸತ್ಯ ಪಿಚ್ಚರ್ ಟೀಮಿಗೆ ಸೇರಿಸಿಕೊಳ್ಳುವ ಆಶಯ ಹೊಂದಿದೆ.
ಜಯನಗರ ಫೋರ್ತ್ ಬ್ಲಾಕ್, ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ ಮತ್ತು ಇದೇ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ “ಮ್ಯಾನ್ ಆಫ್ ದಿ ಮ್ಯಾಚ್” ಚಿತ್ರದ ನಿರ್ದೇಶಕ ರಾಷ್ಟ್ರಪ್ರಶಸ್ತಿ ವಿಜೇತ ಶ್ರೀಯುತ ಡಿ ಸತ್ಯಪ್ರಕಾಶ್ ಮತ್ತು ತಂಡ ಮಲೆನಾಡು ಭಾಗಗಳಲ್ಲಿ ಸುತ್ತಾಡಿ ಒಂದಿಷ್ಟು ಕಲಾವಿದರನ್ನು ಒಂದುಗೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
“ಮ್ಯಾನ್ ಆಫ್ ದಿ ಮ್ಯಾಚ್” ಸಿನಿಮಾ ವಿಭಿನ್ನ ಕಥೆ ಹೊಂದಿರುವ ಚಿತ್ರ ಇದಾಗಿದ್ದು ಈ ಚಿತ್ರದಲ್ಲಿ ಎರಡು ಹಾಡುಗಳಿವೆ ಒಂದು ಹಾಡನ್ನು ವಿ ಮನೋಹರ್ ಸಾಹಿತ್ಯ ಬರೆದಿದ್ದಾರೆ ಈ ಹಾಡಿಗೆ “ಪವರ್ ಸ್ಟಾರ್ ಪುನೀತ್ ರಾಜ ಕುಮಾರ್” ಹಾಡಿದ್ದಾರೆ ಇನ್ನೊಂದು ಹಾಡಿಗೆ ಯೋಗರಾಜ್ ಭಟ್ ಮತ್ತು ಡಿ ಸತ್ಯಪ್ರಕಾಶ್ ಸಾಹಿತ್ಯ ಬರೆದಿದ್ದಾರೆ,
ಸತ್ಯಪ್ರಕಾಶ್ ಅವರು ಎಲ್ಲ ಯುವಕರಿಗೆ ಸಿನಿಮಾ ಮಾಡುವುದನ್ನು ಬಿಡಬೇಡಿ, ನಿಮ್ಮ ಸಿನಿಮಾ ಕನಸನ್ನು ಸಹ ನಿಲ್ಲಿಸಬೇಡಿ, ಸಿನಿಮಾ ನಿರಂತರವಾಗಿರಲಿ, ಎಂದು ಕಿವಿಮಾತು ಹೇಳಿದ್ದಾರೆ, ಈ ಸಂದರ್ಭದಲ್ಲಿ ಮಯೂರ ಫಿಲಂಸ್ ನ ನಿರ್ಮಾಪಕರಾದ ಶ್ರೀಯುತ ಮಂಜುನಾಥ್, ಸತ್ಯ ಪಿಚ್ಚರ್ ನ ಡಿಜಿಟಲ್ ಮಾರ್ಕೆಟಿಂಗ್ ನ ಸುನಿಲ್ ಮಾನೆ,ಚಲನಚಿತ್ರ ನಟ ಮತ್ತು ಕೆಂಪಣ್ಣ ಪ್ರೊಡಕ್ಷನ್ ನಿರ್ಮಾಪಕರಾದ ಚಂದ್ರು ಕೆ ಗೌಡ ಮತ್ತು ಭಜರಂಗಿ ಪ್ರೊಡಕ್ಷನ್ ನಿರ್ಮಾಪಕರಾದ ಶ್ರೀಯುತ ಪ್ರವೀಣ್ ಮತ್ತು ಕನ್ನಡ ಬರಹಗಾರ ಪುನೀತ್ ಶೆಟ್ಟಿ ,ಭೂಮಿ ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ನವೀನ್ ತಲಾರಿ, ಕುರ್ಕುರೆ ಕ್ರಿಯೇಷೇನ್ ಕಾರ್ತಿಕ್, ವಿನಯ್ ಶೆಟ್ಟಿ , ಶ್ರೀಧರ್ ರಂಗಾಯಣ, ಸಂಪತ್ ಕಾಮತ್, ಸತ್ಯ ಪಿಚ್ಚರ್ಸ್ ಮಾರ್ಕೆಟಿಂಗ್ ಕೋಆರ್ಡಿನೇಟರ್ ರಘು ಕಡೂರ್ ಗುಂಡ್ಲು ಉಪಸ್ಥಿತ್ದರು.
ಇದನ್ನು ಒದಿ : https://cnewstv.in/?p=6605
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments