Cnewstv.in /24.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಹಿಟ್ ಅಂಡ್ ರನ್ ಗೆ ಯುವಕ ಬಲಿಯಾದ ಘಟನೆ ಇಂದು ನಡೆದಿದೆ.
ಸಾಗರದ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾರೊಂದು ಗಾಡಿಕೊಪ್ಪದ ಹತ್ತಿರ ಯುವಕನಿಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತನನ್ನು ಸಂತೋಷ ಜಾಧವ್ (25) ಎಂದು ಗುರುತಿಸಲಾಗಿದೆ. ದಾವಣಗೆರೆ ಮೂಲದ ಸಂತೋಷ ದಿನ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಗಾಡಿಕೊಪ್ಪದ ತನ್ನ ಸೋದರಮಾವನ ಮನೆಯಲ್ಲಿ ವಾಸವಾಗಿದ್ದನು.
ಸ್ಥಳೀಯರ ಮಾಹಿತಿಯ ಪ್ರಕಾರ i20 ಕಾರೊಂದು ನಂಜಪ್ಪ ಲೈಫ್ ಕೇರ್ ಹತ್ತಿರ ಕುದುರೆ ಯೊಂದಕ್ಕೆ ಗುದ್ದಿದೆ. ನಂತರ ಗಾಡಿಕೊಪ್ಪದ ಹತ್ತಿರ ಸಂತೋಷವೂ ಸಹ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದಾರೆ
ಈ ಘಟನೆಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರು ಚಾಲಕನ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=6581
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv