Cnewstv.in /22.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಶಿವಮೊಗ್ಗದ ಸಿಡಾಕ್ ಕೇಂದ್ರದ ವತಿಯಿಂದ ಸ್ವಂತ ಉದ್ಯಮ ಸ್ಥಾಪಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ ಹತ್ತು ದಿನಗಳ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾಯಕ್ರಮವನ್ನು ನವೆಂಬರ್ ತಿಂಗಳ ಎರಡನೇ ವಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿಯಲ್ಲಿ ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಮಜಲುಗಳು, ಸರ್ಕಾರದ ನಿಯಮಗಳು ಮತ್ತು ನಿಯಂತ್ರಣಗಳು, ಸ್ಥಳೀಯ ಸಂಪನ್ಮೂಲಗಳ ಬಳಕೆ, ವ್ಯವಹಾರ ನೋಂದಣಿ ಮಾಡುವ ವಿಧಾನ, ತೆರಿಗೆ ನಿಯಮಗಳು, ಬ್ಯಾಂಕ್ ಸಾಲ ಯೋಜನೆಗಳು, ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಸರ್ಕಾರದ ಯೋಜನೆಗಳು, ಹಣಕಾಸು ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ ಹಾಗೂ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು.
ತರಬೇತಿ ಪಡೆಯಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅವಿನಾಶ್, ತರಬೇತುದಾರರು, ಸೀಡಾಕ್, ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೆಕ್ಸ್, ನೆಹರು ರಸ್ತೆ, ಶಿವಮೊಗ್ಗ ಮೊಬೈಲ್ ಸಂಖ್ಯೆ: 9164811887 ಇವರನ್ನು ಸಂಪರ್ಕಿಸಬಹುದೆಂದು ಸಿಡಾಕ್ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆ ತಿಳಿಸಿದೆ.
ಇದನ್ನು ಒದಿ : https://cnewstv.in/?p=6567
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments