Cnewstv.in /22.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿಯೇ ಕೊಳೆತು ನಾರುವಷ್ಟು ವಿಷಯಗಳಿವೆ. ನಮ್ಮ ನಾಯಕರ ವಿರುದ್ಧ ಮಾತನಾಡುವ ನೈತಿಕತೆ ಅವರಿಗೆ ಇಲ್ಲ. ಇನ್ನೂ ನಳೀನ್ ಕುಮಾರ್ ಕಟೀಲ್ ಅವರು ಸೀರೆ ಉಡಿಸಿದರೆ ಹೆಂಗಸು ಅಲ್ಲ, ಗಂಡಸು ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಮುಂದಿನ ಚುನಾವಣೆಯಲ್ಲಿ ಸೈಡ್ ಲೈನ್.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲೂ ಇರುವುದಿಲ್ಲ, ದೇಶದಲ್ಲೂ ಇರುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ರವಿಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅದರೆ ಮುಂದಿನ ಚುನಾವಣೆಯಲ್ಲಿ ನೀವೇ ಇರುವುದಿಲ್ಲ. ಕಾಂಗ್ರೆಸ್ ಪಕ್ಷ ಇರುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದ ಬಿ.ಜೆ.ಪಿ ಪಕ್ಷವೇ ಚುನಾವಣೆಯಲ್ಲಿ ಇರುವುದಿಲ್ಲ. ಬಿಜೆಪಿ ಪಕ್ಷವೇ ಮೂಲೆಗುಂಪಾಗುತ್ತದೆ ನೆನಪಿಟ್ಟುಕೊಳ್ಳಿ ಎಂದರು.
ಈಶ್ವರಪ್ಪನವರೇ ನೀವು ಹಿರಿಯರು.
ಈಶ್ವರಪ್ಪನವರೇ ನೀವು ಹಿರಿಯರು. ನಾವು ನಿಮಗೆ ಬೈಯುವುದಿಲ್ಲ. ನೀವು ಕೂಡ ಇತ್ತೀಚಿನ ದಿನಗಳಲ್ಲಿ ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದೀರಿ. ಬೇಳೂರು ಬೈದರೆ ನೀವು ತಡೆದುಕೊಳ್ಳಲಾಗುವುದಿಲ್ಲ ಹಾಗಾಗಿ ನೀವು ಇನ್ನೂ ಒಂದೇ ನಿಮ್ಮ ಹೇಳಿಕೆಗಳನ್ನು ನೋಡಿಕೊಂಡು ಕೊಡಿ ಎಂದರು.
ತಾಕತ್ತಿದ್ದರೆ ಬಿಜೆಪಿಯವರು ಇವರ ಮೇಲೆ ರೈಡ್ ಮಾಡಿಸಲಿ.
ಇಡೀ ರಾಜ್ಯದ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಷಡಕ್ಷರಿ ಹಾಗೂ ವಿಜಯೇಂದ್ರ. ಒಬ್ಬೊಬ್ಬರಿಂದಲೂ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿದ್ದಾರೆ. ಇವರ ಮೇಲೆ ಇ.ಡಿ ತನಿಖೆ ಆಗಬೇಕು. ತಾಕತ್ತಿದ್ದರೆ ಬಿಜೆಪಿಯವರು ಇವರ ಮೇಲೆ ರೈಡ್ ಮಾಡಿಸಲಿ. ಷಡಕ್ಷರಿ ಮುಂದಿನ ಚುನಾವಣೆಯಲ್ಲಿ ಭದ್ರಾವತಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಸಹ ಹರಿದಾಡುತ್ತಿದೆ. ಸಾವಿರಾರು ಕೋಟಿ ರೂಪಾಯಿ ದುಡ್ಡನ್ನು ಲೂಟಿ ಮಾಡಿದ್ದಾರೆ. ಇವರನ್ನು ಹಿಡಿದರೆ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಹಣ ಸಿಗಬಹುದು ಎಂದರು.
ಇದನ್ನು ಒದಿ : https://cnewstv.in/?p=6561
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv