Cnewstv.in /22.10.2021/ ಮೈಸೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮೈಸೂರು : ಮಗನೇ ತಂದೆ ಹಾಗೂ ತಂದೆಯ ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮೈಸೂರಿನ ಶ್ರೀನಗರದಲ್ಲಿ ನಡೆದಿದೆ.
ಮೈಸೂರಿನ ಹೊರವಲಯದಲ್ಲಿ ಮಗ ಸಾಗರ್ ತನ್ನ ತಂದೆ ಶಿವಪ್ರಕಾಶ್ (56) ಮತ್ತು ಲತಾ (48)ನನ್ನು ಕೊಲೆ ಮಾಡಿದ್ದಾನೆ. ಶ್ರೀನಗರದಲ್ಲಿರುವ ಲತಾ ಮನೆಗೆ ನುಗ್ಗಿದ ಸಾಗರ್ ತನ್ನ ತಂದೆ ಪ್ರಕಾಶನನ್ನು ಮೊದಲು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ನಂತರ ಅದನ್ನು ತಡೆಯಲು ಬಂದಂತಹ ಲತಾನನ್ನು ಸಹ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ.
ಇದನ್ನು ತಡೆಯಲು ಬಂದಂತಹ ಲತಾ ಮಗ ನಾಗಾರ್ಜುನ್ ಮೇಲೆ ಸಹಾ ಹಲ್ಲೆ ನಡೆಸಿದ್ದಾನೆ. ನಂತರ ಸಾಗರ್ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಗಾಯಗೊಂಡಿದ್ದು ನಾಗಾರ್ಜುನ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಹಾಗೂ ಆರೋಪಿ ಸಾಗರ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=6553
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv