Cnewstv.in /21.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ನಗರದಾದ್ಯಂತ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ವರುಣನ ಅಬ್ಬರಕ್ಕೆ ಶಿವಮೊಗ್ಗ ನಗರ ತತ್ತರಿಸಿದೆ.
ಇಂದು ಬೆಳಗಿನ ಜಾವ 3 ಗಂಟೆಯಿಂದ 5 ಗಂಟೆಯ ತನಕ ನಿರಂತರವಾಗಿ ಮಳೆಯಾಗಿತ್ತು. ನಂತರ ಎಂದಿನಂತೆ ಬಿಸಿಲಿತ್ತು. ಜನರು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅದರೆ ಸಂಜೆ 8.15 ರಿಂದ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ.
ಮತ್ತೊಂದೆಡೆ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು ರಸ್ತೆಗಳ ತುಂಬೆಲ್ಲಾ ಗುಂಡಿ ತೆಗೆಯಲಾಗಿದೆ. ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು ರಸ್ತೆ ಯಾವುದು ಗುಂಡಿ ಯಾವುದು ಎಂಬ ವ್ಯತ್ಯಾಸವೇ ತಿಳಿಯದಂತಾಗಿದೆ.
ಇನ್ನೂ ತಗ್ಗು ಪ್ರದೇಶದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿದೆ. ಕೆಲವು ಬಡಾವಣೆಗಳ ರಸ್ತೆಗಳ ತುಂಬೆಲ್ಲಾ ನೀರು ತುಂಬಿದೆ. ರಸ್ತೆಗಳೆಲ್ಲಾ ಕೆರೆಗಳಂತೆ ಆಗಿದೆ.
ಒಟ್ಟಿನಲ್ಲಿ ಎರಡು ಗಂಟೆ ಸುರಿದ ಭಾರಿ ಮಳೆ ಶಿವಮೊಗ್ಗ ನಗರದ ಜನರ ಜೀವನ ಅಸ್ತವ್ಯಸ್ತಗೊಳಿಸಿದೆ. ಇನ್ನು ಕೆಲವು ತಗ್ಗು ಪ್ರದೇಶದ ಮನೆಯವರು ನೀರು ನುಗ್ಗುವ ಆತಂಕದಲ್ಲಿದ್ದಾರೆ.
ಇದನ್ನು ಒದಿ : https://cnewstv.in/?p=6547
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments