Cnewstv.in /20.10.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ವಾಲ್ಮೀಕಿ ರಚಿತ ರಾಮಾಯಣ ಕೇವಲ ಒಂದು ಪುಸ್ತಕ ಅಲ್ಲ. ಬದಲಾಗಿ ಎಲ್ಲರ ಇಡೀ ಬದುಕಿನ ಸಾರ. ಭಾರತೀಯ ಸಂಸ್ಕೃತಿಯ ಪ್ರತೀಕ ಹಾಗೂ ಜೀವನ ಮಾರ್ಗದರ್ಶಿಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾದ ಮೌಲ್ಯಭರಿತ ಸಂಹಿತೆ ರಾಮಾಯಣ. ಹಾಗೂ ನಮ್ಮ ಸಂಸ್ಕೃತಿಯಲ್ಲಿ ಏಕಪತ್ನಿತ್ವ ಪ್ರತಿಪಾದಿಸಿದ ಸಂಹಿತೆ. ಸೀತೆಯ ಮೂಲಕ ಪಾವಿತ್ರ್ಯತೆ, ಲಕ್ಷ್ಮಣ, ಭರತರ ಮೂಲಕ ಭ್ರಾತ್ವತ್ವ, ತಂದೆ-ತಾಯಿ ಗೌರವ ಸೇರಿದಂತೆ ಮಾದರಿ, ಆದರ್ಶ ಜೀವನ ನಡೆಸಲು ದಾರಿ ತೋರುವ ದೀಪಿಕೆ ಇದಾಗಿದ್ದು, ಇಡೀ ವಿಶ್ವವೇ ರಾಮಾಯಣವನ್ನು ಓದುತ್ತಿದೆ.
ರಾಮ ಜನ್ಮಭೂಮಿ ಅಯೋಧ್ಯೆ ಎಂಬುದರಲ್ಲಿ ಅತೀ ಸಾಮಾನ್ಯರಿಂದ ಹಿಡಿದು ವಿದೇಶಿಗರಿಗೂ ಗೊಂದಲವಿಲ್ಲ. ಆದರೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವರು ನಮ್ಮ ದೇಶದವರು ಈ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದ ಅವರು, ಅಯೋಧ್ಯೆ ರಾಮಜನ್ಮ ಭೂಮಿ ಎಂಬ ಬಗ್ಗೆ ರಾಮಾಯಣ ಮಹಾಕಾವ್ಯದಲ್ಲೂ ಉಲ್ಲೇಖವಿದೆ ವೆಂದರು.
ಹಿಂದುಳಿದ ಸಮಾಜದಲ್ಲಿ ಹುಟ್ಟಿದ ವಾಲ್ಮೀಕಿಯವರ ಔನ್ನತ್ಯಕ್ಕೆ ಸರಿಸಾಟಿ ಯಾರಿಲ್ಲ. ಅವರು ತಮ್ಮ ಉನ್ನತ ಜ್ಞಾನದಿಂದ ಮೇಲ್ದರ್ಜೆಗೇರಿದ್ದು, ರಾಮಾಯಣ ಎಲ್ಲರ ಜೀವನದ ದಾರಿದೀಪ ಮತ್ತು ಉತ್ತಮ ಮಾರ್ಗದರ್ಶಿಕೆ. ವಾಲ್ಮೀಕಿಯವರ ರಕ್ತ ನಮ್ಮೆಲ್ಲರ ಮೈಯಲ್ಲಿ ಹರಿಯುತ್ತಿದ್ದು, ಅವರು ತೋರಿದ ಹಾದಿಯಲ್ಲಿ ನಡೆದರೆ ನಾವು ಅವರಿಗೆ ನೀಡುವ ದೊಡ್ಡ ಗೌರವ. ಕುವೆಂಪು ವಿವಿ ಕನ್ನಡ ಭಾರತಿಯ ಪ್ರಾಧ್ಯಾಪಕ ಡಾ.ಶಿವಾನಂದ ಕೆಳಗಿನಮನಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶಿಕ್ಷಣ ತಜ್ಞ, ಕವಿ, ತತ್ವಜ್ಞಾನಿ, ಸಮಾಜ ಶಾಸ್ತ್ರಜ್ಞ, ಮಹಾನ್ ಮಾನವತಾವಾದಿ ಮಹರ್ಷಿ ವಾಲ್ಮೀಕಿ ಸಂಸ್ಕೃತ ಸಾಹಿತ್ಯದ ಪ್ರಥಮ ಕವಿ. ಹಾಗೂ ಎಲ್ಲ ಶಾಸ್ತ್ರಗಳು, ಕಾವ್ಯಗಳಿಗೆ ಸ್ಪೂರ್ತಿಯ ಸೆಲೆ. ಸಂಶೋಧಕರಿಗೆ ಮುಖ್ಯ ನೆಲೆ ಒದಗಿಸಿದವರು. ವೇದಗಳ ಅಂತರಾಳದ ತತ್ವ ಹೀರಿಕೊಂಡು , ಅನುಭಾವದಿಂದ ರಚಿಸಿರುವ ರಾಮಾಯಣ ಮನುಷ್ಯ ಸಕಲ ರಾಗಗಳ, ದುರಿತಗಳಿಗೆ ಪರಿಹಾರ ಒದಗಿಸುವ ಕೈಪಿಡಿ. ಇಡೀ ಮನುಕುಲದ ಸೌಖ್ಯ, ರಕ್ಷಣೆ, ಬೆಳವಣಿಗೆ ಬಗ್ಗೆ ಹೇಳುವ ಮಾರ್ಗದರ್ಶಿಕೆ.
ಇದನ್ನು ಓದಿ : https://cnewstv.in/?p=6531
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments