Cnewstv.in /20.10.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಲಯನ್ ಸಫಾರಿ ಹತ್ತಿರ ಕಾರು ಹಾಗೂ ಲಾರಿ ನಡುವೆ ಅಪಘಾತವಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಸಿಮೆಂಟ್ ತುಂಬಿದ ಲಾರಿಯೊಂದು ಶಿವಮೊಗ್ಗದಿಂದ ಸಾಗರಕ್ಕೆ ಹೋಗುತ್ತಿತ್ತು. ಸಾಗರದಿಂದ ಶಿವಮೊಗ್ಗಕ್ಕೆ ಮಾರುತಿ ಇಕೋ ವಾಹನ ಬರುತ್ತಿತ್ತು. ಲಾರಿ ಮತ್ತು ಕಾರು ಲಯನ್ ಸಫಾರಿ ಸಮೀಪದ ಮುದ್ದಿನಕೊಪ್ಪ ಟೀ ಪಾರ್ಕ್ ಬಳಿ ಮುಖಾಮುಖಿಯಾಗಿದೆ. ಅಪಘಾತದಲ್ಲಿ ಇಕೋ ವಾಹನದ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೃತನನ್ನ ನಾಗೇಂದ್ರ (35) ಎಂದು ಗುರುತಿಸಲಾಗಿದ್ದು ಶಿವಮೊಗ್ಗದ ಸೋಮಿನಕೊಪ್ಪ ನಿವಾಸಿಯಾಗಿದ್ದಾನೆ. ಈತ ಬೇಕರಿಯ ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು. ಅಪಘಾತಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನು ಓದಿ : https://cnewstv.in/?p=6523
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments