cnewstv.in /19.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕೃಷಿ ಕಾಲೇಜಿನ ಜೆ.ಪಿ.ಬಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಗಂಗಾ ಪ್ರಸಾದ್ (59)ರವರು ಕಾಣೆಯಾಗಿದ್ದರು. ಆದರೆ ಇಂದು ಅವರ ಮೃತದೇಹ ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಸಮೀಪದ ಚಿಕ್ಕಬಾಸೂರು ತಾಂಡದ ಕೆರೆ ಸಮೀಪ ಪತ್ತೆಯಾಗಿದೆ.
ಅ.18ರಂದು ಪ್ರೊಫೆಸರ್ ಗಂಗಾಪ್ರಸಾದ್ ರವರು ಕಾಲೇಜಿಗೆ ಹೋಗುವುದಾಗಿ ತಮ್ಮ ಕಾರಿನಲ್ಲಿ ಹೋಗಿದ್ದಾರೆ. ನಂತರ ಅವರು ಕಾಲೇಜಿಗೂ ಹೋಗಿಲ್ಲ, ಮನೆಗೂ ಮರಳಿ ಬರಲಿಲ್ಲ, ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ನಂತರ ಕುಟುಂಬದವರು ಎಲ್ಲೆಡೆ ಹುಡುಕಾಟ ನಡೆಸಿದರು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇಂದು ಬೆಳಿಗ್ಗೆ ಕೆರೆಯಲ್ಲಿ ಪ್ರೊಫೆಸರ್ ಗಂಗಾ ಪ್ರಸಾದ್ ರವರು ಶವವಾಗಿ ಸಿಕ್ಕಿದ್ದಾರೆ. ಇದು ಆತ್ಮಹತ್ಯೆಯೋ, ಕೊಲೆಯೂ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : https://cnewstv.in/?p=6511
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments