cnewstv.in /19.10.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ದೇಶದಲ್ಲಿ ವರುಣನ ಅಬ್ಬರಕ್ಕೆ ಈಗಾಗಲೇ
ಕೆಲವು ರಾಜ್ಯಗಳು ತತ್ತರಿಸಿದೆ. ಕೇರಳದ ಜನ ವರುಣನ ಆರ್ಭಟಕ್ಕೆ ಕಂಗಾಲಾಗಿದ್ದಾರೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಮತ್ತೊಂದೆಡೆ ಭೂಕುಸಿತ. ಕೇರಳದಲ್ಲಿ ಈಗಾಗಲೇ ಸಾವನ್ನಪ್ಪಿದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.
ಇದೇ ಬೆನ್ನಲ್ಲೇ ಕರ್ನಾಟಕದಲ್ಲೂ ಸಹ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಅಕ್ಟೋಬರ್ 21 ರಿಂದ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುತ್ತದೆ. ಅಕ್ಟೋಬರ್ 20 ರಂದು ಲಘು ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೇರಳದ ಹಲವು ಭಾಗಗಳಲ್ಲಿ ಇನ್ನೂ ಮಳೆಯಾಗುತ್ತಿದ್ದು, ಆ. 20 ರ ವರೆಗೆ ಎಲ್ಲೋ ಅಲಟ್ ಮುಂದುವರೆಸಲಾಗಿದೆ. ಕೇರಳದಲ್ಲಿ ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿಕೆಯಾಗಿದ್ದರೆ, ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 28ಕ್ಕೆ ಏರಿಕೆ ಅಗಿದೆ. ರಾಜ್ಯದ ಬಹುತೇಕ ಅಣೆಕಟ್ಟುಗಳು ತುಂಬಿದ್ದು, ಅಣೆಕಟ್ಟುಗಳ ಕೆಲಭಾಗಗಳಲ್ಲಿ ರೆಡ್ ಅಲಾಟ್ ಘೋಷಿಸಲಾಗಿದೆ.
ಇದನ್ನು ಓದಿ : https://cnewstv.in/?p=6489
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments