Breaking News

ಕೊಲೆ ಮಾಡಿ, ಮೃತದೇಹ ಸಮೇತ ಠಾಣೆಗೆ ಬಂದ ಆರೋಪಿಗಳು.

cnewstv.in /18.10.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಂಗಳೂರು : ಗಾರ್ಮೆಂಟ್ ಉದ್ಯೋಗಿಯನ್ನು ಕೊಲೆ ಮಾಡಿ ಮೃತದೇಹ ಸಮೇತ ಠಾಣೆಗೆ ಬಂದು ಆರೋಪಿಗಳು ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೊಸೂರಿನ ಭಾಸ್ಕರ್ (24) ಕೊಲೆಯಾದ ದುರ್ದೈವಿ. ಠಾಣೆಗೆ ಬಂದು ಶರಣಾದ ಆರೋಪಿಗಳನ್ನು ಮುನಿರಾಜು, ಪ್ರಶಾಂತ್, ನಾಗೇಶ್, ಮಾರುತಿ ಎಂದು ಗುರುತಿಸಲಾಗಿದೆ.

ಮೃತ ಭಾಸ್ಕರ್ ಗಾರ್ಮೆಂಟ್ಸ್ ಮೇಲ್ವಿಚಾರಕ ಆಗಿ ಕೆಲಸ ನಿರ್ವಹಿಸುತ್ತಿದ್ದ. ಆರೋಪಿ ಮುನಿರಾಜು ಸಹೋದರಿ ಅದೇ ಗಾರ್ಮೆಂಟ್ಸ್ ನಲ್ಲಿ ಮೊದಲು ಕೆಲಸ ಮಾಡುತ್ತಿದ್ದರು. ಇಬ್ಬರು ಆತ್ಮೀಯವಾಗಿ ಇದ್ದರು. ಇದರ ನಡುವೆಯೇ ಮುನಿರಾಜು ಸಹೋದರಿ ಕೋಲಾರದ ತನ್ನ ಗಂಡನ ಮನೆಯಲ್ಲಿ ಕಿರುಕುಳ ಎಂಬ ಕಾರಣಕ್ಕಾಗಿ ಅನ್ನಪೂರ್ಣೇಶ್ವರಿ ನಗರದ ಚಂದ್ರಾಲೇಔಟ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಳು. ಈ ವಿಷಯ ತಿಳಿದ ಭಾಸ್ಕರ್ ಅವಳಿಗೆ ಬೇರೊಂದು ಮನೆ ಮಾಡುವುದಾಗಿ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾನೆ, ವಿಚಾರ ತಿಳಿಯುತ್ತಿದ್ದಂತೆ ಮುನಿರಾಜು ಹಾಗೂ ಆತನ ಸ್ನೇಹಿತರು ಆಟೋವನ್ನು ಹಿಂಬಾಲಿಸಿ ಸಹೋದರಿ ಮತ್ತು ಆಕೆಯ ಮಗುವನ್ನು ಮನೆಗೆ ಕರೆದಿದ್ದಾನೆ. ಅವರನ್ನು ಮನೆಗೆ ಬಿಟ್ಟು ನಂತರ ಭಾಸ್ಕರ್ ನನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಣೆ ಮತ್ತೆ ತಲೆಗೆ ಹೊಡೆದಿದ್ದಾರೆ ತಕ್ಷಣ ಭಾಸ್ಕರ್ ಕೆಳಗೆ ಬಿದ್ದಿದ್ದಾನೆ. ಭಾಸ್ಕರ್ ನಾಟಕ ಮಾಡುತ್ತಿದ್ದಾನೆ ಎಂದು ಭಾವಿಸಿದ್ದಾರೆ. ಅದರೆ ಸ್ಪಲ್ಪ ಹೊತ್ತಿನ ನಂತರ ಮೃತಪಟ್ಟಿರುವುದಾಗಿ ತಿಳಿದಿದೆ.

ಆರೋಪಿ ಮುನಿರಾಜು ನಡೆದ ಎಲ್ಲಾ ವಿಚಾರಗಳನ್ನು ತನ್ನ ತಾಯಿಗೆ ತಿಳಿಸಿ, ಭಾಸ್ಕರನ ಮೃತದೇಹವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಶರಣಾಗಿದ್ದಾನೆ. ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುನಿರಾಜು ಹಾಗೂ ಆತನ ಸ್ನೇಹಿತರನ್ನು ಬಂಧಿಸಿದ್ದಾರೆ.

ಇದನ್ನು ಓದಿ : https://cnewstv.in/?p=6476

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*