cnewstv.in /18.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ರಾಕಿಂಗ್ ಸ್ಟಾರ್ ಯಶ್ ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಬರದ ಹೊತ್ತಿನಲ್ಲಿ ಕರ್ನಾಟಕದ ಹಲವು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆ ಕಾಯಕದ ಮೂಲಕ ಅನೇಕರಿಗೆ ಪ್ರೇರಣೆ ಕಾರ್ಯ ಮಾಡಿದ ರಾಕಿಂಗ್ ಸ್ಟಾರ್ ಯಶ್ ಅವರ ನೇತೃತ್ವದ ಯಶೋಮಾರ್ಗ ಇದೀಗ ಶಿವಮೊಗ್ಗದ ಪುರಾಣ ಪ್ರಸಿದ್ಧ ಕೊಳವೊಂದರ ಪುನರುಜ್ಜೀವನ ಕಾರ್ಯಕ್ಕೆ ಮುಂದಾಗಿದೆ.
ಸುಮಾರು 400 ವರ್ಷಗಳಷ್ಟು ಇತಿಹಾಸವಿರುವ “ಚಂಪಕ ಸರಸು ಕಲ್ಯಾಣಿ” ಪುನಶ್ಚೇತನ ಕಾರ್ಯಕ್ಕೆ ಮುಂದಾಗಿದ್ದಾರೆ. ಅನಂತಪುರ ಸಮೀಪದ ಮಲಂದೂರಿನಲ್ಲಿ ಚಂಪಕ ಸರಸು ಕಲ್ಯಾಣಿ ಕೆಳದಿ ಅರಸ ರಾಜವೆಂಕಟಪ್ಪ ಅವರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದಾಗಿ ಕಲ್ಯಾಣಿ ಹಾಳಾಗಿತ್ತು. ಇಂದು ಇದರ ಪುನರುಜ್ಜೀವನ ಕೆಲಸಕ್ಕೆ ಚಾಲನೆ ನೀಡಲಾಯಿತು.
ಪುನಶ್ಚೇತನ ಯೋಜನೆಯ ಮುಖ್ಯ ಕೆಲಸಗಳ ಸಂಕ್ಷಿಪ್ತ ಮಾಹಿತಿ.
* ಕಳೆದ ಸುತ್ತಲಿನ ಜಾಗ ಸ್ವಚ್ಛತೆ
* ಹಿಂಬಾಗಿಲು ದುರಸ್ತಿ
*ಹಳೆಯ ಶಿಲ್ಪ ಎತ್ತಿ ನಿಲ್ಲಿಸುವುದು
*ಕಟ್ಟೆ ಕಲ್ಲಿನ ಕೊಳೆ ತೆಗೆಯುವುದು.
*ಕೆರೆ ನಡುವಿನ ಗುಡಿ ಸರಿಪಡಿಸಿ ಬಣ್ಣ ಬಳಿಯುವುದು.
* ದೇವಾಲಯದ ಪ್ಲಾಸ್ಟರಿಂಗ್, ಬಣ್ಣ, ನೆಲಕ್ಕೆ ಟೈಲ್ಸ್ ಅಳವಡಿಸುವುದು.
* ಮರಗಳಿಗೆ ಕಟ್ಟೆ ನಿರ್ಮಾಣ
*ಪ್ರವೇಶದ್ವಾರದ ಎದುರು ಕಾವಲುಗಾರರ ಮನೆ ನಿರ್ಮಾಣ
*ಮಾರ್ಗ ಮಾಹಿತಿ ಫಲಕ
*ಕೊಳದ ಪ್ರವೇಶಕ್ಕೆ ಗೇಟ್ ಅಳವಡಿಸಿವುದು.
ಇದನ್ನು ಓದಿ : https://cnewstv.in/?p=6473
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments