Breaking News

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 2021-22 ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹಣೆ ಕಾನೂನು ಬಾಹೀರವಾಗಿದೆ.

cnewstv.in /13.10.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 2021-22 ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹಣೆ ಕಾನೂನು ಬಾಹೀರವಾಗಿದೆ ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆ ವತಿಯಿಂದ ಆರೋಪಿಸಲಾಯಿತು.

ಫೆಬ್ರವರಿ 2021 ರಲ್ಲಿ ಕೊರೊನಾ ಸಂಕಷ್ಟದಲ್ಲಿ ಆಸ್ತಿ ತೆರಿಗೆ ಕಾನೂನಿಗೆ ತಿದ್ದುಪಡಿಯನ್ನು ತಂದಿದೆ. ಈ ಸಂಬಂಧ ಎಲ್ಲಾ ಪಾಲಿಕೆಗಳಿಗೆ ಸರಕಾರ ಕಾನೂನು ತಿದ್ದುಪಡಿಯ ಬಗ್ಗೆ ಸುತ್ತೋಲೆ ಹೊರಡಿಸಿ ಪಾಸದ ಕಟ್ಟಡಗಳಿಗೆ ಎಸ್. ಆರ್ ದರ ಆಧಾರಿತ ಮೌಲ್ಯದ ಮೇಲೆ ಶೇಕಡಾ 0.2 ಕಡಿಮೆ ಇಲ್ಲದಂತೆ ಮತ್ತು ಶೇಕಡಾ 1.51% ತೆರಿಗೆ ದರಕ್ಕೆ ಹೆಚ್ಚಾಗದಂತೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳಿಗೆ ಎಸ್. ಆರ್ ದರ ಆಧಾರಿತ ಮೌಲ್ಯದ ಮೇಲೆ ಶೇಕಡಾ 0.5 ಕ್ಕಿಂತ ಕಡಿಮೆ ಇಲ್ಲದಂತೆ ಹಾಗೂ ಶೇಕಡಾ 50 ರಷ್ಟು ಹೆಚ್ಚಾಗದಂತೆ ತೆರಿಗೆ ದರಗಳನ್ನು ಪಾಲಿಕೆ ಸಭೆಗಳಲ್ಲಿ ನಿರ್ಧರಿಸಲು ಸೂಚಿಸಿತ್ತು.

ಆದರೆ ಈ ಸಂಬಂಧ ಮಾರ್ಚ್ 2021 ರಲ್ಲಿ ಕರೆದ ವಿಶೇಷ ಸಭೆಯಲ್ಲಿ ಯಾವ ಯಾವ ಆಸ್ತಿಗಳಿಗೆ ಎಷ್ಟು ತೆರಿಗೆ ದರ
ವಿಧಿಸಬೇಕು ಎಂದು ತೀರ್ಮಾನವನ್ನು ಆ ಸಭೆಯಲ್ಲಿ ಕೈಗೊಂಡಿಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆ ತೆರಿಗೆದಾರರಿಗೆ ವಿಧಿಸುತ್ತಿರುವ ತೆರಿಗೆ ದರಗಳು ಮಹಾನಗರ ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿರುವ ತೆರಿಗೆ ದರಗಳು, ಮಹಾನಗರ ಪಾಲಿಕೆಯ ಸಭೆಯಲ್ಲಿ ತೆರಿಗೆ ನಿರ್ಧಾರ ಮಾಡದೆ ಇರುವುದು ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳು ಬೇಕಾಬಿಟ್ಟಿ ತೆರಿಗೆ ದರಗಳನ್ನು ವಿಧಿಸಿದೆ.

ಕಾನೂನಿನ ಪ್ರಕಾರ ಪಾಲಿಕೆಯ ಸಭೆಯಲ್ಲಿ ತೆರಿಗೆ ದರಗಳನ್ನು ನಿರ್ಧರಿಸಬೇಕಾಗಿತ್ತು. ಹಾಗೂ ಈ ರೀತಿ ತೆರಿಗೆ
ದರವನ್ನು ನಿರ್ಧಾರ ಮಾಡಲು ಸರಕಾರ ಸಷ್ಟ ಸೂಚನೆ ನೀಡಿತ್ತು. ಪಾಲಿಕೆಯ ಸಭೆಯಲ್ಲಿ ತೆರಿಗೆ ದರಗಳನ್ನು ನಿರ್ಧರಿಸದೇ ಇರುವುದರಿಂದ, ಶಿವಮೊಗ್ಗದಲ್ಲಿ ತೆರಿಗೆ ಸಂಗ್ರಹಣೆ ಕಾನೂನು ಬಾಹಿರವಾಗಿರುತ್ತವೆ. ಶಿವಮೊಗ್ಗ ಮಹಾನಗರ‌ ಪಾಲಿಕೆಯ ಆಡಳಿತ ತೆರಿಗೆದಾರರ ಹಿತ ಕಾಪಾಡಲು ಸಂಪೂರ್ಣ ವಿಫಲವಾಗಿದೆ. ಆಡಳಿತ ಪಕ್ಷದವರೇ ಹೇಳಿಕೊಳ್ಳುವಂತೆ ರೂ20 ಕೋಟಿ ತೆರಿಗೆ ಸಂಗ್ರಹಣೆ ಆಗಿದ್ದರೆ ಅದನ್ನೂ ಕೂಡ ಕಾನೂನು ಬಾಹಿರ ತೆರಿಗೆ ಸಂಗ್ರಹಣೆ ಆಗಲಿದೆ.

ಈ ಸಂಧರ್ಭದಲ್ಲಿ ಅಶ್ವರನಾರಾಯನ್ ಶೆಟ್ಟಿ, ವಸಂತಕುಮಾರ್, ಸತೀಶ್ ಕುಮಾರ್ ಶೆಟ್ಡಿ, ಅಶೋಕ ಕುಮಾರ್ ಉಪಸ್ಥಿತರಿದ್ದರು.

ಇದನ್ನು ಓದಿ : https://cnewstv.in/?p=6442

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*