Breaking News

ಕುತ್ತಿಗೆ ಕೊಯ್ದು ಮಹಿಳೆಯ ಬರ್ಬರ ಹತ್ಯೆ.

cnewstv.in /10.10.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಹತ್ತಿರ ಮಹಿಳೆಯ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.‌

ಹೇಮಾವತಿ (35) ಕೊಲೆಯಾದ ಮೃತ ದುರ್ದೈವಿ. ಇವರು ಕುಪ್ಪನಹಳ್ಳಿ ಗ್ರಾಮದ ನಿವಾಸಿಯಾಗಿದ್ದು ಕಳೆದ ಹತ್ತು ವರ್ಷಗಳ ಹಿಂದೆ ಇವರ ಗಂಡ ತೀರಿಕೊಂಡಿದ್ದರು. ಮೂರು ವರ್ಷಗಳಿಂದ ಅದೇ ಗ್ರಾಮದ ಅನಿಲ್ ಎಂಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವಿತ್ತು ಎಂದು ಹೇಳಲಾಗಿದ್ದು, ಈ ಬಗ್ಗೆ ಊರಿನ ಮುಖಂಡರು ಪಂಚಾಯಿತಿ ನಡೆಸಿ ಇಬ್ಬರು ದೂರವಿರುವಂತೆ ಹೇಳಿದರು. ಅಗ ಹೇಮಾವತಿ ದೂರವಾದರೆ ಅವರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದರು. ಇಂದು ಹೇಮಾವತಿ ಕೆಲಸಕ್ಕೆ ಹೋಗುವಾಗ ಹತ್ಯೆ ಮಾಡಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ : https://cnewstv.in/?p=6397

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*