Cnewstv.in / 04.10.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರು : ಚಂದ್ರ ಗ್ರಹದ ಮೇಲೆ ನಿವೇಶನ ಖರೀದಿ ಮಾಡಲು ಹೋಗಿ ಮಹಿಳೆಯೊಬ್ಬಳು ವಂಚನೆಗೊಳಗಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹಿಳೆಯೊಬ್ಬಳಿಗೆ ಆಕಾಶ್ ನಾರಾಯಣ್ ಎಂಬಾತನು ಚಂದ್ರಗ್ರಹದಲ್ಲಿ ನಿವೇಶನವನ್ನು ಕೊಡಿಸುವುದಾಗಿ ಹಾಗೂ ಚೈನ್ ಲಿಂಕ್ ಬಿಸಿನೆಸ್ ನಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಬರುತ್ತದೆ ಎಂದು ಆಸೆ ಹುಟ್ಟಿಸಿ, 25, 000 ರೂಪಾಯಿ ಗೂಗಲ್ ಪೇ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಕೆಲ ದಿನಗಳ ನಂತರ ಯಾವುದೇ ರೀತಿಯಾದಂತಹ ಲಾಭ ಬರದ ಕಾರಣ ಆ ನಂಬರ್ ಗೆ ಸಂಪರ್ಕಿಸಲು ಪ್ರಯತ್ನ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಆಗ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಆಗ ಗೂಗಲ್ ಪೇ ಮಾಡಿದ ಖಾತೆಯನ್ನು ಪರಿಶೀಲಿಸಿದಾಗ ಅದು ಆಕಾಶ ನಾರಾಯಣ ಎಂಬಾತನಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಆತ ಇದೇ ರೀತಿ ಅನೇಕ ಜನರಿಗೆ ಚೈನ್ ಲಿಂಕ್ ಬುಸಿನೆಸ್ ಹಾಗೂ ಚಂದ್ರಗ್ರಹದಲ್ಲಿ ನಿವೇಶನ ಕೊಡಿಸುವುದಾಗಿ ಮೋಸ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಕುರಿತು ಸೈಬರ್ ಕ್ರೈಂ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : https://cnewstv.in/?p=6321
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments