Cnewstv.in / 03.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕಳೆದ ಹಲವು ತಿಂಗಳುಗಳಿಂದ ನೆಡೆಯುತ್ತಿರುವ ನೇಟ್ವರ್ಕ ಹೋರಾಟ ಜಿಲ್ಲೆಯ ಸಾಗರ ತಾಲೂಕಿನ ಕಟ್ಟಿನಕಾರಿನಿಂದ ಇಂದು ಬೃಹತ್ ಪಾದಯಾತ್ರೆಯಲ್ಲಿ ಸಾಮೂಹಿಕ ನಾಯಕತ್ವದ ಮೂಲಕ ಆಗಮಿಸಿದರು. ಪಾದಯಾತ್ರೆಯಲ್ಲಿ ಶರಾವತಿ ಹಿನ್ನೀರಿನ ಚನ್ನಗೊಂಡ ಗ್ರಾಮದ ಕಟ್ಟಿನಕಾರು. ಕಾರಣಿ. ಕೋಗಾರ್. ಹಲವಾರು ಗ್ರಾಮಗಳಿಂದ ವಿದ್ಯಾರ್ಥಿಗಳು. ಮಹಿಳಾ ಸಂಘಟನೆಯ ಪ್ರಮುಖರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಕಟ್ಟಿನಕಾರಿನಿಂದ – ಕೋಗಾರ್ ವರೆಗೆ ಸುಮಾರು 15 ಕೀಲೋ ಮೀಟರ್ ದೂರ ಪಾದಯಾತ್ರೆ ನಡೆಸಿದ ಹೋರಾಟಗಾರರು ಸುಡುತ್ತಿರುವ ಬಿಸಿಯನ್ನು ಲೆಕ್ಕಿಸದೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು ರಸ್ತೆಯುದ್ದಕ್ಕೂ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಭಾರಂಗಿ ಹೋಬಳಿಯ ಕೋಗಾರ್. ಕಟ್ಟಿನಕಾರು. ಕಾರಣಿಯ. ಬಿಳಿಗಾರು. ಇನ್ನೂ ಹಲವಾರು ಕುಗ್ರಾಮಗಳಲ್ಲಿ ನೇಟ್ವರ್ಕ ಸಮಸ್ಯೆಯಿಂದ ಈ ಭಾಗದ ಹಲವು ಗ್ರಾಮಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ನೇಟ್ವರ್ಕ ಸಮಸ್ಯೆಯಿಂದ ರೈತರು ನಾಡ ಕಚೇರಿ. ಗ್ರಾಮ ಪಂಚಾಯ್ತಿ. ಸರಿಯಾದ ಸಮಯಕ್ಕೆ ಸೇವೆ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಸಾಕಷ್ಟು ಮಹಿಳಾ ಸ್ತ್ರೀ ಶಕ್ತಿ ಹಾಗೂ ಗ್ರಾಮೀಣ ಸಹಕಾರ ಸಂಘಗಳಿದ್ದು ಇವುಗಳ ದಿನನಿತ್ಯದ ನಿರ್ವಹಣೆಗೆ ನೇಟ್ವರ್ಕ ಸಮಸ್ಯೆ ತಲೆದೋರಿರುದರಿಂದ ಜನರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.
ಈಗಾಗಲೇ ಶಾಲಾ ಕಾಲೇಜುಗಳು ಪುನರಾರಂಭಗೊಂಡಿದ್ದು ಈ ಭಾಗದ ವಿದ್ಯಾರ್ಥಿಗಳು ಸಾಕಷ್ಟು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು ಶಾಲೆಗಳಿಗೆ ತೆರಳಲು 4ರಿಂದ 5 ಕೀಲೋ ಮೀಟರ್ ದುರ್ಗಮ ಕಾಡಿನಲ್ಲಿ ಹಾದು ಹೋಗುವ ಪರಿಸ್ಥಿತಿ ಇದೆ. ಇಲ್ಲಿನ ಹಲವು ಕುಟುಂಬಗಳು ಇನ್ನೂ ರಸ್ತೆ. ವಿದ್ಯುತ್ ಸಂಪರ್ಕವನ್ನೆ ಪಡೆದಿಲ್ಲ ಕನಿಷ್ಠ ಮೂಲ ಸೌಲಭ್ಯ ವಂಚಿತ ಸಾಕಷ್ಟು ಕುಟುಂಬಗಳಿದ್ದು ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕಿದೆ. ಪ್ರಮುಖವಾಗಿ ನೇಟ್ವರ್ಕ ಇಂದಿನ ಅಗತ್ಯ ಸೇವೆಗಳಲ್ಲಿ ಪ್ರಮುಖವಾಗಿದ್ದು ಈ ಭಾಗದಲ್ಲಿ ಇದು ಗಗನ ಕುಸುಮವಾಗಿದ್ದು ಹಲವು ತಿಂಗಳುಗಳಿಂದ ಹೋರಾಟ ಸಮಿತಿಯು ನಿರಂತರವಾಗಿ ಜಿಲ್ಲಾಡಳಿತಕ್ಕೆ ಹಾಗೂ ಸ್ಥಳೀಯ ಶಾಸಕರಿಗೆ ಟವರ್ ನಿರ್ಮಾಣದ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು ಸಹ ಕೇವಲ ಸಭೆಗಳನ್ನು ನೆಡೆಸಿರುದು ಬಿಟ್ಟರೆ. (Aftical Fiber) ಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಈ ಭಾಗದಲ್ಲಿ ನೇಟ್ವರ್ಕ ನಿರ್ಮಾಣಕ್ಕೆ ಪೂರಕವಾಗಿ ಯಾವುದೇ ಅಗತ್ಯ ಕ್ರಮ ಕೈಗೊಳ್ಳದಿರುದರಿಂದ ಈ ಭಾಗದ ಸಾವಿರಾರು ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದು ಈ ಭಾಗದ ಜನರಿಗೆ
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಆದ್ಯತೆಯ ಮೇಲೆ ಈ ಭಾಗದ ಜನರಿಗೆ ನೇಟ್ವರ್ಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕು ಕಳೆದ ಹಲವು
ತಿಂಗಳುಗಳಿಂದ ಈ ಭಾಗದ ಜನರು ನಿರಂತರ ಹೋರಾಟದ ಮೂಲಕ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟರು ಸಹ ಕೇವಲ ಸಭೆಗಳನ್ನು ನೆಡೆಸಿರುದು ಬಿಟ್ಟರೆ ನೇಟ್ವರ್ಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯಾವುದೇ ಪ್ರತಿಕ್ರಿಯೆಗಳನ್ನು ನೆಡೆಸದಿರುವುದನ್ನು ಖಂಡಿಸಿದರು.
ಕಟ್ಟಿನಕಾರಿನಿಂದ ಕೋಗಾರ್ ವೃತ್ತ ತಲುಪಿದ ಹೋರಾಟಗಾರರು ಸುಮಾರು 2ಗಂಟೆಗಳ ಸಮಯ ಸಾಗರ – ಭಟ್ಕಳ ರಸ್ತೆ ತಡೆ ನಡೆಸಿದರು. ನಂತರ ಚನ್ನಗೊಂಡ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಕ್ಕೊತ್ತಾಯ ಪ್ರತಿಭಟನೆಯ ಮೂಲಕ ನೇಟ್ವರ್ಕ ನಿರ್ಮಾಣಕ್ಕೆ ಮೀನಾಮೇಶ ಎಣಿಸುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಪೋಷಣೆ ಕೂಗಿದರು.ಈ ಬಗ್ಗೆ ಮಾತನಾಡಿದ ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತ್ಯನಾರಾಯಣ ಜಿ ಟಿ. ಬರುವ ಜನವರಿ 26ರ ವೇಳೆಗೆ ನೇಟ್ವರ್ಕ ನಿರ್ಮಾಣಕ್ಕೆ ಸರ್ಕಾರ ಪೂರಕ ಕ್ರಮಗಳನ್ನು ಕೈಗೊಳ್ಳದಿದ್ದರೆ. ಜನವರಿ 26ರ ಗಣರಾಜ್ಯೋತ್ಸವ ದಿನದಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮಸ್ಥರೆಲ್ಲರ ಸಮ್ಮುಖದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು. ತೀ. ನಾ. ಶ್ರೀನಿವಾಸ್ ಮಾತನಾಡಿ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ ನನ್ನ ಅವಧಿಯಲ್ಲಿ ನೇಟ್ವರ್ಕ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದು ಈಗಲೂ ಸಹ ಹೋರಾಟದ ಜೊತೆಗೆ ಇದ್ದು ಮುಂದೆಯೂ ಸಹ ಈ ಈ ಭಾಗದ ಜನರ ಜೊತೆಗೆ ಇರುತ್ತೇನೆ ಎಂದರು.
ಬೆಳಿಗ್ಗೆ ಸುಮಾರು 11 ಗಂಟೆಗೆ ಆರಂಭವಾದ ಪ್ರತಿಭಟನಾ ಪಾದಯಾತ್ರೆಯಲ್ಲಿ ವೃದ್ಧರು. ವಿದ್ಯಾರ್ಥಿಗಳು. ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದರು ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ರಸ್ತೆಯುದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು
ಜನರ ಬೇಡಿಕೆಗಳೇನು…!?
▪️ಕರೂರು ಬಾರಂಗಿ ಹೋಬಳಿಗೆ ಕನಿಷ್ಠ 20 ಟವರ್ ನಿರ್ಮಾಣಕ್ಕೆ ತತ್ ಕ್ಷಣವೇ ಮುಂದಾಗಬೇಕು.
▪️ಶರಾವತಿ ಮುಳುಗಡೆ ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ
ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು.
ಈ ಸಂಧರ್ಭದಲ್ಲಿಹೋರಾಟ ಸಮಿತಿಯ ಪ್ರಮುಖರಾದ ಗೌತಮ್ ಹೆಗಡೆ.ರಾಜಕುಮಾರ್.ಉದಯ್. ರಾಜಪ್ಪ. ಓಂಕಾರ್. ಸೋಮಶೇಖರ್.ಲೋಹಿತ್. ಸೇರಿದಂತೆ ಮಲ್ಲಿಕಾರ್ಜುನ ಹಕ್ರೆ. ರಾಜಶೇಖರ್ ಗಾಳಿಪುರ. ಪ್ರಭಾವತಿ ಚಂದ್ರಕುಮಾರ್. ಸತ್ಯ ನಾರಾಯಣ ಜಿ.ಟಿ. ದೇವರಾಜ್ ಕಪ್ಪದೂರು. ಯೋಗರಾಜ ಯಮಗಳಲೆ. ಶೇಖರ್ ಹೆರಬೆಟ್ಟು. ನಾಗರಾಜ್ ಎಸ್ ಎಲ್. ಆರತಿ ಉದಯ್ ಕುಮಾರ್. ಚಂದ್ರಹಾಸ್ ಕೋಗಾರ್. ರಾಜೇಶ್ ಕಟ್ಟಿನಕಾರು. ಕೇಶವ ಹಾಡೋಳ್ಳಿ.ಇನ್ನಿತರರು ಹಾಜರಿದ್ದರು.
ವರದಿ : ಸುಕುಮಾರ್ ಎಂ
ಇದನ್ನು ಓದಿ : https://cnewstv.in/?p=6314
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments