Cnewstv.in / 03.10.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಮಾದಕದ್ರವ್ಯ ವ್ಯಸನಿಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದಾಗಿ ಜಿಲ್ಲೆಯಲ್ಲಿ ವಿಶೇಷ ಟೆಸ್ಟಿಂಗ್ ಕಿಟ್ ವಿತರಿಸಲಾಗಿದೆ.
ಈ ವಿಶೇಷವಾದ ಕಿಟ್ ಸಹಾಯದಿಂದ ಮಾದಕ ದ್ರವ್ಯವನ್ನು ಸೇವನೆ ಮಾಡಿದ ವ್ಯಕ್ತಿಗಳ ಮೂತ್ರವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೂಡಲೇ ಪಾಸಿಟಿವ್ – ನೆಗಟಿವ್ ಫಲಿತಾಂಶ ನೀಡುತ್ತದೆ. ಪಾಸಿಟಿವ್ ಫಲಿತಾಂಶ ಬಂದ ವ್ಯಕ್ತಿಯ ವಿರುದ್ಧ 27(ಬಿ) NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಈ ಪ್ರಕರಣದ ಅಡಿಯಲ್ಲಿ 10000 ವರೆಗೆ ದಂಡ ಅಥವಾ 6 ತಿಂಗಳ ವರೆಗೆ ಕಾರಾಗೃಹ ಶಿಕ್ಷೆ ವಿಧಿಸುವ ಅವಕಾಶವಿದೆ.
ನಿನ್ನೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರನ್ನ ಪರೀಕ್ಷೆಗೆ ಒಳಪಡಿಸಿದ್ದು, ಇವರ ಪರೀಕ್ಷೆ ವರದಿ ಪಾಸಿಟಿವ್ ಬಂದಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿ : https://cnewstv.in/?p=4009
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments