Cnewstv.in / 01.10.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರು : ಬಿಬಿಎಂಪಿಯ ಬಹುನಿರೀಕ್ಷಿತ ವಿದ್ಯುತ್ ಚಾಲಿತ ಬಸ್ಸಿಗೆ ಸಾರಿಗೆ ಸಚಿವ ಶ್ರೀರಾಮುಲು
ಕೆಂಗೇರಿ ಬಸ್ ಡಿಪೋದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಜೆಬಿಎಂ ಆಟೋ ಲಿಮಿಟೆಡ್ ಕಂಪನಿ ತಯಾರಿಸಿರುವ ಈ ಬಸ್ಸಿಗೆ 90 ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸರಿಸುಮಾರು 220 ಕಿಲೋಮೀಟರ್ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಇ ಬಸ್ ತಯಾರಾಗಿದ್ದು, ಒಟ್ಟು 130 ಕೋಟಿ ರೂಪಾಯಿ ಬಸ್ಸಿಗಾಗಿ ಮೀಸಲಿಡಲಾಗಿದೆ. ಉತ್ತರಪ್ರದೇಶ ಮೂಲದ ಕಂಪನಿಯು ಬಸ್ಸುಗಳನ್ನು ತಯಾರಿಸಿದ್ದು, ಇನ್ನೆರಡು ತಿಂಗಳಲ್ಲಿ 95 ಬಸ್ಸುಗಳು ರೋಡಿಗಿಳಿಯಲಿದೆ.
ಇದನ್ನು ಓದಿ : https://cnewstv.in/?p=6295
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments