Cnewstv.in / 28.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಅ.11 ರಂದು ಅಂತರಾಷ್ಟ್ರೀಯ ವಿಕೋಪ ಅಪಾಯ ತಗ್ಗಿಸುವಿಕೆ ದಿನಾಚರಣೆ ಅಂಗವಾಗಿ ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇದರ ವಿಕೋಪ ನಿರ್ವಹಣಾ ಕೇಂದ್ರವು ‘ವಿಕೋಪ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಉಪಯೋಗಗಳು’ ವಿಷಯ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.
18 ವರ್ಷ ಮೇಲ್ಪಟ್ಟವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಟೈಪ್ ಮಾಡಿ ಇಮೇಲ್ ಮುಖಾಂತರ ಅಥವಾ ಕೈಬರಹದಲ್ಲಿ ಪೋಸ್ಟ್ ಮೂಲಕ ಪ್ರಬಂಧಗಳನ್ನು ಕಳುಹಿಸಬಹುದಾಗಿದ್ದು, ನವೆಂಬರ್ 15 ಪ್ರಬಂಧ ಸ್ವೀಕರಿಸಲು ಕಡೆಯ ದಿನವಾಗಿದೆ.
ವರ್ಡ್ ಫೈಲ್ ಡಾಕ್ಯುಮೆಂಟ್ ಕಳುಹಿಸುವವರು atiessaycompetition@gmail.com ಇಮೇಲ್ ಮಾಡಬೇಕು. ಹಾಗೂ ಕೈಬರಹದಲ್ಲಿ ಬರೆದ ಪ್ರಬಂಧಗಳ(ಹಾರ್ಡ್‍ಕಾಪಿ)ನ್ನು ಮಹಾ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಲಲಿತ್ ಮಹಲ್ ರಸ್ತೆ, ಮೈಸೂರು-570011 ಈ ವಿಳಾಸಕ್ಕೆ ನವೆಂಬರ್ 15 ರೊಳಗೆ ತಲುಪುವಂತೆ ಕಳುಹಿಸಬೇಕು.
ಕನ್ನಡ ಅಥವಾ ಇಂಗ್ಲಿಷ್ ಭಾಷೆಗಳ ಪ್ರಬಂಧಗಳಿಗೆ ಪ್ರತ್ಯೇಕ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಮೊದಲ ಬಹುಮಾನ ರೂ.10,000, ದ್ವಿತೀಯ ಬಹುಮಾನ ರೂ.8000 ಮತ್ತು ತೃತೀಯ ಬಹುಮಾನ ರೂ.5000/- ಗಳನ್ನು ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಹಮ್ಮಿಕೊಳ್ಳುವ ಕಾರ್ಯಾಗಾರದಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ https://atimysore.gov.in ವೆಬ್‍ಸೈಟ್‍ನ್ನು ವೀಕ್ಷಿಸಬಹುದು ಹಾಗೂ ಸಂಯೋಜಕರ ಮೊ.ಸಂ: 9740768931, 990122215 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಇದನ್ನು ಓದಿ : https://cnewstv.in/?p=6255
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv