Breaking News

ಶಿವಮೊಗ್ಗದಲ್ಲಿ ಬಾಕ್ಸಿಂಗ್ ಕ್ರೀಡೆಯನ್ನು ಅಭಿವೃದ್ಧಿ ಪಡಿಸಲು ಸಹಕಾರ ನೀಡಬೇಕು – ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ , ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್

Cnewstv.in /27.09.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ : ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ವತಿಯಿಂದ ಮಾನ್ಯ ಕ್ರೀಡಾ ಸಚಿವರಾದ ಶ್ರೀ ನಾರಾಯಣ ಗೌಡ ಕೆ ಸಿ ರವರನ್ನು ನೆಹರು ಕ್ರೀಡಾಂಗಣದಲ್ಲಿ ಭೇಟಿಯಾಗಿ ಶಿವಮೊಗ್ಗ ನಗರದಲ್ಲಿ ಕಳೆದ 3ವರ್ಷಗಳಿಂದ ಬಾಕ್ಸಿಂಗ್ ಕ್ರೀಡೆಯನ್ನು ತರಬೇತಿ ನೀಡುತ್ತಿದ್ದು ಕಳೆದ ಮಿನಿ ಒಲಿಂಪಿಕ್ಸ್ ನಲ್ಲೂ ಕ್ರೀಡಾಪಟುವೊಬ್ಬ ಪದಕವನ್ನು ಪಡೆದಿದ್ದು ತಿಳಿಸಿ ಆದರೆ ಇಲ್ಲಿನ ಬಾಕ್ಸಿಂಗ್ ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಸ್ಥಳಾವಕಾಶ ಹಾಗೂ ಬಾಕ್ಸಿಂಗ್ ರಿಂಗ್ ಅವಶ್ಯಕತೆಯಿದ್ದು ಈ ಕುರಿತು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಉಪಯೋಗವಾಗಿಲ್ಲವಾಗಿದ್ದು ಶಿವಮೊಗ್ಗದಲ್ಲಿ ಬಾಕ್ಸಿಂಗ್ ಕ್ರೀಡೆಯನ್ನು ಅಭಿವೃದ್ಧಿ ಪಡಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಲಾಯಿತು

ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ವತಿಯಿಂದ 2012ರಿಂದ ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ನೆಹರು ಕ್ರೀಡಾಂಗಣದಲ್ಲಿ ನಿರ್ಭಯ ಉಚಿತ ಕರಾಟೆ ತರಬೇತಿ ಕೇಂದ್ರ ಎಂಬ ಶೀರ್ಷಿಕೆಯಡಿ ಬಾಲಕಿಯರಿಗೆ ಉಚಿತ ಆತ್ಮರಕ್ಷಣೆ ಕರಾಟೆ ತರಬೇತಿಯನ್ನು ನೀಡಿ ಕೊಂಡು ಬಂದಿತು ಮಳೆ ಹಾಗೂ ತರಬೇತಿ ಸಂದರ್ಭದಲ್ಲಿ ಒಳಾಂಗಣ ಕಟ್ಟಡದ ಅವಶ್ಯಕತೆಯಿದು ಸುಸಜ್ಜಿತವಾದ ಕಟ್ಟಡವೊಂದನ್ನು ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಗೆ ಮಾಡಿಕೊಟ್ಟಲ್ಲಿ ಉಚಿತ ಕರಾಟೆ ತರಬೇತಿ ಯನ್ನು ಮುಂದುವರೆಸಿಕೊಂಡು ಹೋಗುತ್ತವೆ ಎಂದು ಸಚಿವರಲ್ಲಿ ವಿನಂತಿಸ ಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಶರವಣ ಮತ್ತು ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ನ ಸಹ ಕಾರ್ಯದರ್ಶಿ ವೆಂಕಟೇಶ್ ಹಾಗೂ ಹರ್ಷಿತ್ ಸಾಗರ ಉಪಸ್ಥಿತರಿದ್ದರು💐

ಇದನ್ನು ಒದಿ : https://cnewstv.in/?p=6230

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*