Cnewstv.in / 26.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಸಕ್ರೆಬೈಲಿನಾ ಹಿರಿಯ ಹೆಣ್ಣಾನೆ ಗಂಗಾ ಇಂದು ಸಾವನ್ನಪ್ಪಿದೆ.
85 ವರ್ಷದ ಗಂಗಾ ಆನೆ ವಯೋಸಹಜ ಮೃತಪಟ್ಟಿದೆ. ಗಂಗಾ ಆನೆ ಆರು ಮರಿಗಳಿಗೆ ಜನ್ಮ ನೀಡಿತ್ತು. ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಾ ಆನೆಗೆ ಬಿಡಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ರಾಜ್ಯದ 8 ಆನೆ ಬಿಡಾರಗಳಲ್ಲಿ ಹಿರಿಯ ಆನೆ ಎಂದು ಗುರುತಿಸಿಕೊಂಡಿದ್ದ ಆನೆ ಗಂಗಾ. 1971 ರಲ್ಲಿ ಕಾಕನಕೋಟೆಯಿಂದ ಗಂಗಾ ಆನೆಯನ್ನು ಸಕ್ರೆಬೈಲಿಗೆ ತರಿಸಲಾಗಿತ್ತು. ರಾಜ್ಯದಲ್ಲಿ ಯಾವುದೇ ಖೆಡ್ಡಾ ಆಪರೇಷನ್ ನಡೆದರೂ ಸಹ ಗಂಗಾ ಆನೆಯನ್ನು ಬಳಸಲಾಗುತ್ತಿತ್ತು.
ಇದನ್ನು ಓದಿ : https://cnewstv.in/?p=6216

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv