Breaking News

ಕಾಂಗ್ರೆಸ್ ರಾಜ್ಯ ನಾಯಕರಿಗೆ ಬಿಸಿತುಪ್ಪವಾದ, ವಿಧಾನಸಭಾ ಕ್ಷೇತ್ರದ ಕೈ ನಾಯಕರ ನಡುವಿನ ವೈಮನಸ್ಸು.

Cnewstv.in / 26.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕಾಂಗ್ರೆಸ್ ರಾಜ್ಯ ನಾಯಕರಿಗೆ ಬಿಸಿತುಪ್ಪವಾದ,
ವಿಧಾನಸಭಾ ಕ್ಷೇತ್ರದ ಕೈ ನಾಯಕರ ನಡುವಿನ ವೈಮನಸ್ಸು

ಶಿವಮೊಗ್ಗ : ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕೈ ನಾಯಕರ ನಡುವಿನ ಭಿನ್ನಮತ, ಕಾಂಗ್ರೆಸ್ ನಾಯಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್. ಎಂ.ಮಂಜುನಾಥಗೌಡರ ನಡುವಿನ ಭಿನ್ನಮತ ಮತ್ತೊಮ್ಮೆ ಬಹಿರಂಗವಾಗಿದೆ.

ಮಾಜಿ ಸಚಿವ ಹಾಗೂ ಪ್ರಸ್ತುತ ಕೆಪಿಸಿಸಿ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಿಮ್ಮನೆ ರತ್ನಾಕರ್ ರವರು ಆರ್. ಎನ್. ಮಂಜುನಾಥಗೌಡರ ವಿರೋಧ ಅಸಮಾಧಾನವನ್ನು ಪತ್ರ ಬರೆದು ಹೊರಹಾಕಿದ್ದಾರೆ.

ಪತ್ರದಲ್ಲಿರುವ ಪ್ರಮುಖ ಆರೋಪಗಳು

* ಕಾಂಗ್ರೆಸ್ ಪಕ್ಷಕ್ಕೆ ಬಂದ 5 ತಿಂಗಳಲ್ಲಿ ಗುಂಪುಗಾರಿಕೆಯನ್ನು ಮಾಡುತ್ತಿದ್ದಾರೆ.

*ಕಾಂಗ್ರೆಸ್ ಪಕ್ಷದ ಮುಖಂಡರು ಫೋಟೋ ಬಳಸಿಕೊಂಡು, ಪಕ್ಷದ ಚಿನ್ನ ಬಳಸಿಕೊಳ್ಳುತ್ತಿಲ್ಲ.

*ಮಂಜುನಾಥ್ ಗೌಡರ ಹೋರಾಟ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದಾದರೊಂದು ಪಕ್ಷದ ಟಿಕೆಟಿಗಾಗಿ ಎಂದು ಸಣ್ಣ ಮಗುವಿನಿಂದ ಹಿಡಿದು ಅಕ್ಷರಸ್ಥರ ಎಲ್ಲರಿಗೂ ಅರಿವಾಗುತ್ತೆ.

* ಪಕ್ಷದ ಮುಖಂಡರಲ್ಲಿ ಗೊಂದಲ ಸೃಷ್ಟಿಸಿ, ಇಕಟ್ಟಿನಲ್ಲಿ ಸಿಕ್ಕಿಸಿ, ಡಿಸಿಸಿ ಬ್ಯಾಂಕಿನಲ್ಲಿ ಮಾಡಿದ ಹಾಗೆ ಕಾಂಗ್ರೆಸ್ನಲ್ಲಿ ಮಾಡದಿರುವುದು ತಮ್ಮಗೂ ಒಳ್ಳೆಯದು ಹಾಗೂ ಪಕ್ಷಕ್ಕೂ ಒಳ್ಳೆಯದು

*ಖಾಸಗಿಯಾಗಿ ಸಭೆಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಖಾಸಗಿಯಂತೆ ಕಾರ್ಯ
ಕ್ರಮ ಮಾಡುವುದಕ್ಕೆ ಮಾಧ್ಯಮಗಳಿಗೆ ಪತ್ರ ಬರೆದು ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿಮ್ಮನೆ ರತ್ನಾಕರ್ ಹಾಗೂ ಆರ್. ಎನ್. ಮಂಜುನಾಥಗೌಡರ ನಡುವಿನ ಗೊಂದಲದ ಬಗ್ಗೆ ಈಗಾಗಲೇ ಹೈಕಮಾಂಡಿಗೆ ತಿಳಿದಿದೆ. ಹೈಕಮಾಂಡ್, ಈ ನಾಯಕರ ನಡುವಿನ ಗೊಂದಲವನ್ನು ಶ್ರೀಘವೇ ಬಗೆಹರಿಸಲಿದ್ದಾರೆ.

ಹೆಚ್.ಎಸ್.ಸುಂದರೇಶ್
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು.

ಇನ್ನು ಚುನಾವಣೆ ಸಮಯದಲ್ಲಿ, ತೀಥಹಳ್ಳಿ ಕ್ಷೇತ್ರದಲ್ಲಿ ಪ್ರಾಬಲ್ಯತೆ ಸಾಧಿಸಿರುವ ಇಬ್ಬರು ನಾಯಕರ ನಡುವಿನ ಪೈಪೋಟಿ ಕಾಂಗ್ರೆಸ್ ನಾಯಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಇದನ್ನು ಓದಿ : https://cnewstv.in/?p=6209

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*