Breaking News

ಚಿತ್ರಮಂದಿರದಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ. ಆದರೆ ಈ ಷರತ್ತುಗಳು ಅನ್ವಯ

Cnewstv.in / 25.09.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಂಗಳೂರು : ಲಾಕ್ ಡೌನ್ ಆರ್ಥಿಕ ಸಂಕಷ್ಟದಲ್ಲಿದ್ದ ಚಿತ್ರೋದ್ಯಮಕ್ಕೆ ರಿಲೀಫ್ ಸಿಕ್ಕಿದೆ ಅಕ್ಟೋಬರ್ 1 ರಿಂದ ಸಿನಿಮಾ ಥಿಯೇಟರ್ ಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶವನ್ನ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರದಲ್ಲಿ ಶೇ.100 ರಷ್ಟು ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ನೀಡಲಾಗಿದೆ. ಇಷ್ಟು ದಿನ ಚಿತ್ರಮಂದಿರದಲ್ಲಿ ಶೇ. 50ರಷ್ಟು ಆಸನಗಳ ಭರ್ತಿ ಗೆ ಮಾತ್ರ ಅವಕಾಶ ನೀಡಿತ್ತು.

ರಾಜ್ಯದಲ್ಲಿ ಎರಡನೇ ಅಲೆಯ ಪ್ರಕರಣಗಳ ಸಂಖ್ಯೆ ಬಹುತೇಕ ಕಡಿಮೆ ಇದೆ ಹಾಗೂ ಅನೇಕ ನಿರ್ಮಾಪಕರು ಚಿತ್ರಮಂದಿರದಲ್ಲಿ ಶೇ. 100 ರಷ್ಟು ಅವಕಾಶ ಕೊಡುವಂತೆ ಮನವಿ ಮಾಡಿದರು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ನು ಅನೇಕ ಸ್ಟಾರ್ ನಟರ ಸಾಲು ಸಾಲು ಚಿತ್ರಗಳು ತೆರೆ ಮೇಲೆ ಬರಲು ಸಿದ್ಧವಾಗಿದೆ.

ಈ ಷರತ್ತುಗಳು ಅನ್ವಯ.

*ಥಿಯೇಟರ್ ಗೆ ಬರುವ ಪ್ರೇಕ್ಷಕರು ಕಡ್ಡಾಯವಾಗಿ ಒಂದು ಡೋಸ್ ಲಸಿಕೆಯನ್ನು ಪಡೆದಿರಬೇಕು.

*ಪಾಸಿಟಿವಿಟಿ ದರ ಶೇ. 1 ಕ್ಕಿಂತ ಜಾಸ್ತಿ ಇರುವ ಜಿಲ್ಲೆಗಳಲ್ಲಿ ಶೇಕಡಾ 50% ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ.

*ಪಾಸಿಟಿವಿಟಿ ದರ ಶೇ. 2 ರಷ್ಟು ಇದ್ದರೆ ಸಿನಿಮಾ ಮಂದಿರಗಳನ್ನು ಸ್ಥಗಿತಗೊಳಿಸಲಾಗುವುದು.

*ಗರ್ಭಿಣಿಯರು ಹಾಗೂ ಮಕ್ಕಳಿಗೆ ಚಿತ್ರಮಂದಿರದಲ್ಲಿ ಅವಕಾಶ ನಿಷೇಧ

ಇದನ್ನು ಓದಿ : https://cnewstv.in/?p=6194

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

 

Leave a Reply

Your email address will not be published. Required fields are marked *

*