Breaking News

ಶಿವಮೊಗ್ಗ : ವೈಭವದ ಸಾಂಪ್ರದಾಯಿಕ ಒಂಬತ್ತು ದಿನಗಳ ದಸರಾ ಆಚರಣೆ. 2 ಕೋಟಿ ಪ್ರಸ್ತಾವನೆ..

Cnewstv.in / 23.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ನಾಡಹಬ್ಬ ದಸರಾ ಆಚರಣೆಯನ್ನು ನಡೆಸುವ ಸಂಬಂಧ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಮೇಯರ್ ಸುನಿತಾ ಅಣ್ಣಪ್ಪನವರ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಲಾಯಿತು.

ಈ ಬಾರಿ ಶಿವಮೊಗ್ಗ ದಸರಾ ಆಚರಣೆಗೆ ಎರಡು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಸರ್ಕಾರ ದಸರಾ ಹಬ್ಬಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ನಂತರ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು

ಬಜೆಟ್ ನಿಗದಿಗೆ ಸಂಬಂಧಿಸಿದಂತೆ ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಬಜೆಟ್ ಬಿಡುಗಡೆಯಾಗದೆ ಸರಳ ಆಚರಣೆ ಮಾಡಲಾಗಿತ್ತು. ಈ ಬಾರಿ ದಸರಾ ಆಚರಣೆಗೆ 2 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೇ. 70.17 ಅದಾಯ ತೆರಿಗೆ ಸಂಗ್ರಹವಿದ್ದು, ಶೇ. 100ರಷ್ಟು ಸಂಗ್ರಹವಾದರೆ 50 ಲಕ್ಷ ರೂಪಾಯಿ ಆಚರಣೆಗೆ ನಿಗದಿಪಡಿಸಲಾಗುವುದು.

ಚಿದಾನಂದ ಎಸ್. ವಟಾರೆ.
ಪಾಲಿಕೆ ಆಯುಕ್ತ

ಇದನ್ನು ಓದಿ : https://cnewstv.in/?p=6172

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*