Breaking News

ಸ್ವಯಂ ಗಸ್ತು ಆರಂಭಿಸಿದ ಬಡಾವಣೆಯ ಜನ !!!??

Cnewstv.in / 23.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಇತ್ತೀಚೆಗೆ ನಗರದ ಬಡಾವಣೆಯೊಂದರಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರೇ ಸ್ವಯಂ ರಕ್ಷಣೆಗೆ ಮುಂದಾಗಿದ್ದಾರೆ.

ಶಿವಮೊಗ್ಗ ನಗರದ ಅವಳಿ ಬಡಾವಣೆಗಳಾಗಿರುವ ಸ್ವಾಮಿ ವಿವೇಕಾನಂದ ಬಡಾವಣೆ ಹಾಗೂ ಗೋಪಾಲಗೌಡ ಬಡಾವಣೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗಿದೆ. ಈ ಕುರಿತು ಪೊಲೀಸರಿಗೆ ಮನವಿ ಸಹ ಮಾಡಲಾಗಿದೆ ಆದರೂ ಕೂಡ ಯಾವುದೇ ರೀತಿಯಾದಂತಹ ಪ್ರಯೋಜನವಾಗಿಲ್ಲ.

ಬಡಾವಣೆಯ ಸ್ಥಳೀಯ ಜನರು ಒಟ್ಟಾಗಿ ಸೇರಿ ಗಸ್ತು ಮಾಡುತ್ತಿದ್ದಾರೆ.‌ ಹಾಗೂ ಇನ್ನು ಮುಂದೆ ನಿರಂತರವಾಗಿ ಗಸ್ತನ್ನು ತಿರುಗುತ್ತೇವೆ. ನಮ್ಮ ಬಡಾವಣೆ ರಕ್ಷಣೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಬಡಾವಣೆಯ ಜನ ಆರಂಭ ಮಾಡಿರುವಂತಹ ಈ ಸ್ವಯಂ ಗಸ್ತಿನಿಂದ ಅದರೂ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಾ ಅಂತ ಕಾದುನೋಡಬೇಕಿದೆ.

ಇದನ್ನು ಓದಿ : https://cnewstv.in/?p=6168

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*