Cnewstv.in / 19.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಸಾಗರ: (ಚನ್ನಗೊಂಡ ಗ್ರಾಮ)
ಅಮೃತ ಯೋಜನೆಯಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಶರಾವತಿ ಹಿನ್ನೀರಿನ ಕುಗ್ರಾಮಗಳನ್ನು ಹೆಚ್ಚು ಆದ್ಯತೆಯ ಮೇಲೆ ಪರಿಗಣಿಸದಿರುದಕ್ಕೆ ಈ ಭಾಗದ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಸಚಿವ ಕೆ ಎಸ್ ಈಶ್ವರಪ್ಪ ನವರ ನೇತೃತ್ವದಲ್ಲಿ ಅಮೃತ ಯೋಜನೆಯಡಿಯಲ್ಲಿ ಸಾಗರ ತಾಲ್ಲೂಕಿನ ಕೆಳದಿ. ಆವಿನಹಳ್ಳಿ. ಹೀರೇನೆಲ್ಲೂರು. ಎಸ್ ಎಸ್ ಭೋಗ್. ಗ್ರಾಮಗಳನ್ನು ಗುರುತಿಸಿ ಆಯ್ಕೆ ಮಾಡಿರುವುದು ಸರಿಯಷ್ಟೇ ಆದರೆ ತಾಲ್ಲೂಕಿನಲ್ಲಿ ಕನಿಷ್ಠ ಪಕ್ಷ 7ರಿಂದ 8 ಗ್ರಾಮ ಪಂಚಾಯ್ತಿ ಗಳನ್ನಾದರೂ ಆಯ್ಕೆ ಮಾಡಬೇಕಿತ್ತು ಜೊತೆಗೆ ಇದರಲ್ಲಿ ಸಾಕಷ್ಟು ಮೂಲ ಸೌಕರ್ಯ ವಂಚಿತ ಹಾಗೂ ತೀವ್ರ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿರುವ ಚನ್ನಗೊಂಡ ಗ್ರಾಮವನ್ನು ಕೈ ಬಿಟ್ಟಿರುದಕ್ಕೆ ಗ್ರಾಮದ ಜನರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಯೋಜನೆಗಳಲ್ಲಿಯೂ ಸರ್ಕಾರ ಚನ್ನಗೊಂಡ ಗ್ರಾಮವನ್ನು ನಿರ್ಲಕ್ಷ್ಯಸುತ್ತಿದೆ. ಇದರಿಂದ ಮೂಲ ಸೌಲಭ್ಯ ಒದಗಿಸುವಲ್ಲಿ ಚನ್ನಗೊಂಡ ಗ್ರಾಮವು ಸಾಕಷ್ಟು ಹಿಂದುಳಿಯಲು ಪ್ರಮುಖ ಕಾರಣವಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಗಳಿಗೆ ಗ್ರಾಮ ವಾಸ್ತವ್ಯ ಮಾಡಲು ತಿಳಿಸಿದಾಗಲೂ ಕೇವಲ ನೆಪ ಮಾತ್ರಕ್ಕೆ ತಾಲ್ಲೂಕಿನ ಎಸ್ ಎಸ್ ಭೋಗ್ ಗ್ರಾಮದ ನಾಗೋಡಿ ಬಳಿಯ ಇಕ್ಕಿಬೀಳು ಹತ್ತಿರ ಗ್ರಾಮ ವಾಸ್ತವ್ಯ ಹೂಡಿದ್ದರು ಇದು ಯಾವುದೇ ಪ್ರಯೋಜನಕ್ಕೂ ಬಂದಿಲ್ಲ. ಗ್ರಾಮ ವಾಸ್ತವ್ಯದಿಂದ ಈ ಭಾಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಜೊತೆಗೆ ಇತ್ತೀಚೆಗೆ ಜಲ ಜೀವನ ಮಿಶನ್ ಯೋಜನೆಯ ಮಾಹಿತಿ ನೀಡುವ ಸಲುವಾಗಿ ಇಲ್ಲಿನ ಕುದರೂರು ಗ್ರಾಮ ಪಂಚಾಯಿತಿ ಇತ್ತೀಚೆಗೆ ಏರ್ಪಡಿಸಿದ್ದ ಗ್ರಾಮ ಸಭೆಯಲ್ಲಿ ಯಾವುದೇ ಅಧಿಕಾರಿಗಳಿಗೆ.
ಗ್ರಾಮಸ್ಥರಿಗೆ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಸಭೆ ನೆಡೆಸಿರುದು ಯೋಜನೆಯ ಬಗ್ಗೆ ಈ ಭಾಗದ ಜನರಿಗೆ ಸಾಕಷ್ಟು ಗೊಂದಲವಿದ್ದು ವಿಶೇಷ ಗ್ರಾಮ ಸಭೆ ನಡೆಸಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಪ್ರಮುಖವಾಗಿ ತೀರಾ ಹಿಂದುಳಿದ ಚನ್ನಗೊಂಡ ಗ್ರಾಮದಲ್ಲಿ ನೇಟ್ವರ್ಕ. ರಸ್ತೆ. ವಿದ್ಯುತ್. ಕುಡಿಯುವ ನೀರು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದು ಸಚಿವರು ಹಾಗೂ ಶಾಸಕರು ಒಮ್ಮೆ ಇತ್ತ ಗಮನ ಹರಿಸಬೇಕು ಎಂದು ಈ ಭಾಗದ ಜನರು ಒತ್ತಾಯಿಸಿದರು.
ಇದನ್ನು ಓದಿ : https://cnewstv.in/?p=6073
ಹಿನ್ನೀರಿನ ಪ್ರದೇಶದ ಜನರ ಬೇಡಿಕೆಯೇನು…?
◾ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ರವರು ಚನ್ನಗೊಂಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಈ ಭಾಗದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು
◾ಈ ಭಾಗದ ಮೂಲ ಸೌಕರ್ಯ ವಂಚಿತ ಚನ್ನಗೊಂಡ. ಕುದರೂರು. ಗ್ರಾಮಗಳನ್ನು ಅಮೃತ ಯೋಜನೆಗೆ ಸೇರಿಸಲು ಕ್ರಮ ವಹಿಸಬೇಕು.
◾ಅಭಿವೃದ್ಧಿಗೆ ಪೊರಕವಾಗಿ ನೆಟ್ವರ್ಕ್. ರಸ್ತೆ. ವಿದ್ಯುತ್. ಇವುಗಳಿಗೆ ಆದ್ಯತೆಯ ಮೇರೆಗೆ ಈ ಭಾಗದ ಗ್ರಾಮಗಳಿಗೆ ವಿಶೇಷ ಅನುದಾನ ನೀಡಬೇಕು.
◾ಡಿಜಿಟಲ್ ಲೈಬ್ರರಿಯ ಮೊದಲು ನೇಟ್ವರ್ಕ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು.
◾ಅಮೃತ ಹಾಗೂ ಜಲಜೀವನ್ ಯೋಜನೆಯ ಬಗ್ಗೆ ಈ ಭಾಗದಲ್ಲಿ ಮಾಹಿತಿ ಕೊರತೆ ಇದ್ದು ಈ ಬಗ್ಗೆ ಪಿಡಿಒ ಗಳಿಗೆ ನಿರ್ದೇಶನ ನೀಡಬೇಕು.
ವರದಿ: ಸುಕುಮಾರ್ ಎಂ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv