Breaking News

ಬೀದಿ ನಾಯಿಗಳ ಉಪಟಳಕ್ಕೆ ಹೈರಾಣಾದ ಜನ

Cnewstv.in / 19.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳು ಜನರಿಗೆ ಕಿರಿಕಿರಿಯನ್ನುಂಟು ಮಾಡ್ತಿರೋದು ಒಂದುಕಡೆಯಾದರೆ, ಬಡಾವಣೆಗಳಲ್ಲಿ ಬೀದಿ ನಾಯಿಗಳ ಉಪಟಳ ಮತ್ತೊಂದೆಡೆಯಾಗಿದೆ.

ನಗರದಲ್ಲಿ ಬೀದಿ ನಾಯಿಗಳು ಕಾಟಕ್ಕೆ ಜನ ಹೈರಾಣಾಗಿದ್ದಾರೆ. ರಸ್ತೆಯಲ್ಲಿ ಏಳರಿಂದ ಎಂಟು ಬೀದಿ ನಾಯಿಗಳು ಗುಂಪು ಗುಂಪಾಗಿ ಇರುವುದನ್ನು ನೋಡಿಯೇ ಜನರು ಹೆದರುತ್ತಿದ್ದಾರೆ. ರಾತ್ರಿ ಸಮಯದಲ್ಲಂತೂ ಬೀದಿ ನಾಯಿಗಳು ಬೊಗಳುವ ಸದ್ದು ಜನರ ನಿದ್ದೆಗೆಡಿಸಿದೆ.

ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಓಡಾಡುವಾಗ ಒಮ್ಮೆಲೆ ಬೀದಿ ನಾಯಿಗಳು ಅಡ್ಡ ಬರುವುದರಿಂದ ಅಪಘಾತಗಳು ಸಹ ಹೆಚ್ಚಾಗುತ್ತಿದೆ. ಪಾದಚಾರಿಗಳ ಮೇಲೂ ಸಹ ಬೀದಿ ನಾಯಿಗಳು ದಾಳಿ ಮಾಡಿರುವ ಕೆಲವೊಂದು ಘಟನೆಗಳು ನಡೆದಿದೆ.

ಇನ್ನೂ ಈ ಬೀದಿನಾಯಿಗಳ ಕೊಂದರೆ ಪ್ರಾಣಿಪ್ರಿಯರು ವಿರೋಧವನ್ನ ವ್ಯಕ್ತ ಪಡಿಸುತ್ತಾರೆ. ಹಾಗೆಯೇ ಬಿಟ್ಟರೆ ಜನಸಾಮಾನ್ಯರಿಗೆ ತೊಂದರೆ. ಈ ಎರಡನ್ನು ಸರಿದೂಗಿಸಿ ಆದಷ್ಟು ಬೇಗ ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ನೀಡಬೇಕಿದೆ.‌

ಇದನ್ನು ಓದಿ : https://cnewstv.in/?p=6061

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*