ಧರ್ಮ ರಕ್ಷಣೆಯನ್ನು ಎಲ್ಲಿಯವರೆಗು ಸ್ವಾಮೀಜಿಗಳು ಮಾಡುತ್ತಾರೊ ಅಲ್ಲಿಯ ವರೆಗೆ ಭಾರತಕ್ಕೆ ಸಾವಿಲ್ಲ : ಬಿ. ವೈ ರಾಘವೇಂದ್ರ

Cnewstv.in / 18.09.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

 

ಧರ್ಮ ರಕ್ಷಣೆಯನ್ನು ಎಲ್ಲಿಯವರೆಗು ಸ್ವಾಮೀಜಿಗಳು ಮಾಡುತ್ತಾರೊ ಅಲ್ಲಿಯ ವರೆಗೆ ಭಾರತಕ್ಕೆ ಸಾವಿಲ್ಲ : ಶ್ರೀ ಬಿ. ವೈ ರಾಘವೇಂದ್ರ

ಹೊಸನಗರ : ನಮ್ಮ ದೇಶ ನಿಂತಿರುವುದೇ ಧರ್ಮದ ಚೌಕಟ್ಟಿನಲ್ಲಿ, ನೂರಾರು ಜಾತಿಗಳಿವೆ ಅದರಲ್ಲೂ ಕೂಡ ಹಲವು ಉಪ ಜಾತಿಗಳಿವೆ
ಹನಿ ಹನಿ ಸೇರಿ ಹಳ್ಳವಾಗಿ ಅದು ಕೊನೆಯಲ್ಲಿ ವಿಶಾಲವಾದ ಸಮುದ್ರವನ್ನು ಸೇರುತ್ತದೆ ಅದನ್ನು ಯಾರು ಮುಚ್ಚಿಡಲು ಸಾಧ್ಯವಿಲ್ಲ ಅಂತೆಯೇ ನಮ್ಮ ಧರ್ಮವನ್ನು ಯಾರು ಮುಟ್ಟಲು ಸಾಧ್ಯವಿಲ್ಲ ಒಳ ಪಂಗಡವನ್ನು ಮರೆತು ಎಲ್ಲರು ಒಗ್ಗಟ್ಟಿನಿಂದ ನಮ್ಮ ಧರ್ಮ ರಕ್ಷಣೆಗೆ ನಿಲ್ಲಬೇಕು, ಧರ್ಮ ರಕ್ಷಣೆಯನ್ನು ಎಲ್ಲಿಯವರೆಗು ಸ್ವಾಮೀಜಿಗಳು ಮಾಡುತ್ತಾರೊ ಅಲ್ಲಿಯ ವರೆಗೆ ಭಾರತಕ್ಕೆ ಸಾವಿಲ್ಲ ಎಂದು ಬಿ. ವೈ ರಾಘವೇಂದ್ರ ಅವರು ತಿಳಿಸಿದರು

ಅಖಿಲ ಭಾರತ ವೀರಶೈವ ಮಹಾಸಭಾ, ಶ್ರೀ ಶಿವಯೋಗ ಮಂದಿರ ಸ್ಥಾಪಕರಾದ ಸಮಾಜಯೋಗಿ ಕಾರಣಿಕ ಯುಗಪುರುಷ ಪೂಜ್ಯ ಶ್ರೀ ಲಿಂ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ 154 ನೇ ಜಯಂತ್ಯುತ್ಸವ ಮತ್ತು ಸಾಧಕರ ಸಮಾವೇಶ ಹೊಸನಗರದ ಮೂಲೆಗದ್ದೆ ಮಠದಲ್ಲಿ ಸಂಸದರಾದ ಶ್ರೀ ಬಿ. ವೈ ರಾಘವೇಂದ್ರ ಅವರು ಭಾಗವಹಿಸಿ ಮಾತನಾಡಿದರು.

ಕುಟುಂಬ ವ್ಯವಸ್ಥೆ ದುರಂತದಲ್ಲಿದೆ : ನಮ್ಮ ಮಕ್ಕಳು ಯುವಕರು ಆಧುನಿಕ ಸಮಾಜದ ಓಟದಲ್ಲಿ ನಮ್ಮ ಧರ್ಮ ನಮ್ಮ ಸಂಸ್ಕಾರವನ್ನು ನಮ್ಮ ಯುವಕರು ಮರೆತಿದ್ದಾರೆ, ದಯವಿಟ್ಟು ಸಮಾಜನ್ನು ತಿದ್ದುವ ಮಾಠಾಧಿಷರು ಯುವಕರಿಗೆ ಸರಿಯಾದ ಮಾರ್ಗ ದರ್ಶನವನ್ನು ನೀಡುವಂತೆ ಆಗಬೇಕು ಜೊತೆಗೆ ಈ ರೀತಿಯ ಉತ್ಸವಗಳು ಧರ್ಮದ ಶಿಕ್ಷಣ ಕೊಟ್ಟು ಸರಿ ದಾರಿಗೆ ತರಬೇಕಿದೆ
-ಶ್ರೀಮತಿ ಬಿ. ವೈ.ಅರುಣಾ ದೇವಿ

ಕಾರ್ಯಕ್ರಮದ ನೇತೃತ್ವ ಮತ್ತು ಅಧ್ಯಕ್ಷತೆಯನ್ನು ಮೂಲೆಗದ್ದೆ ಮಠದ ಶ್ರೀಗಳಾದ ಶ್ರೀ ಅಭಿನವ ಚನ್ನಬಸವ ಶ್ರೀಗಳು ವಹಿಸಿದ್ದರು. ಮತ್ತು ವಿವಿಧ ಮಠದ ಶ್ರೀಗಳು,ಪ್ರಮುಖರಾದ ಶ್ರೀ ಬಿ ಯುವರಾಜ್ ಗೌಡ್ರು, MCA ನಿರ್ದೇಶಕ ಹೆಚ್ ತೀರ್ಥೆಶ್,ಎ ವಿ ಮಲ್ಲಿಕಾರ್ಜುನ್, ಹಾಲಪ್ಪ ಚಿಕ್ಕ ಮಣತಿ,ಶಿವಣ್ಣ ಹರತಾಳು,ಕಲ್ಯಾಣಪ್ಪಗೌಡರುಶ್ರೀಗಳ ಹೆಸರು ಸೇರಿಸಿ ,ಜಯಶೀಲಪ್ಪ ಗೌಡ್ರು,ಯತೀಶ್ ಹಿಲಗೋಡು,ರಾಜಶೇಖರ್ ಕೋಗಟಿ,ಮತ್ತಿತರು ಉಪಸ್ಥಿತರಿದ್ದರು.

ಇದನ್ನು ಒದಿ : https://cnewstv.in/?p=6047

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*