ವಿಶ್ವ ನಾಯಕ ನಮ್ಮ ಪ್ರಧಾನಿ ನರೇಂದ್ರ ಮೋದಿಜೀ : ಬಿ.ವೈ ರಾಘವೇಂದ್ರ

Cnewstv.in / 17.09.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಬಿಜೆಪಿ ಸಾಮಾಜಿಕ ಜಾಲತಾಣ ವತಿಯಿಂದ ನೆಡೆದ ಇನ್ಫೋಗ್ರಾಫಿಕ್ ಮತ್ತು ಜಿಲ್ಲೆಯ ಪಲಾನುಭವಿಗಳ ವಿಡಿಯೋ ಉದ್ಘಾಟಿಸಿ ಮಾತನಾಡಿ ಸಂಸದ : ಬಿ.ವೈ ರಾಘವೇಂದ್ರ ಸೇವೆ ಮತ್ತು ಸಮರ್ಪಣೆ ಎಂಬ ಹೆಸರಿನಲ್ಲಿ ಯಾವುದೇ ದುಂದು ವೆಚ್ಚ ಮಾಡದೇ ಇಂದು ಮೋದಿ ಜೀ ಯವರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮವನ್ನು ನಾವು ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಮಾಡಿದ ವಿವಿಧ ಯೋಜನೆಯನ್ನು ನಮ್ಮ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವುದು ನಮ್ಮ ಗುರಿಯಾಗಿದೆ.

ವಿಶ್ವ ನಾಯಕ ಶ್ರೀ ನರೇಂದ್ರ ಮೋದಿಜೀ ಮತ್ತು ನಮ್ಮ ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ದೇಶದೆಲ್ಲದೆ ದಾಪುಗಳು ಇಟ್ಟು ಸಾಗುತ್ತಿದೆ, ನಾನು ಮೊದಲ ಬಾರಿಗೆ ಸಂಸದ ಆಗಿದ್ದ ಸಂದರ್ಭದಲ್ಲಿ ಒಂದು ಕೊರಗಿತ್ತು, ಏನೆಂದರೆ ಆಗ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರು ಆದರೆ ನಮ್ಮ ಪಕ್ಷದ ನೇತೃತ್ವದಲ್ಲಿ ನಮ್ಮ ನಾಯಕರು ಪ್ರಧಾನಿ ಆಗಬೇಕು ಎಂಬುದು ಆಸೆ ಇತ್ತು ಆದರೆ ಇಂದು ಅದು ಆ ಆಸೆ ನೆರವೇರಿದೆ.ವಿಶ್ವದ ಯಾವುದೇ ದೇಶಕ್ಕೂ ಹೋದರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ ಎಂದರೆ ಅವರು ಪಡೆದ ಜನ ಮನ್ನಣೆಯೆ ಕಾರಣ. ನಮ್ಮ ಮೋದಿಜಿಯವರ ಯೋಜನೆ ಜನರಿಗೆ ಸಾಮಾಜಿಕ ಜಾಲತಾಣದಲ್ಲಿ ಯಶಸ್ವಿಯಾಗಿ ಪ್ರಚಾರವನ್ನು ಕೊಡೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮೇಘರಾಜ್, ಹಿರಿಯರಾದ ಭಾನುಪ್ರಕಾಶ್, ಮೋಹನಪ್ಪ ಬಂಡಾರಿ, ಸುನೀತಾ ಅಣ್ಣಪ್ಪ. ಸಿದ್ದರಾಮಣ್ಣ ಜಿಲ್ಲಾ ಸಾಮಾಜಿಕ ತಾಣದ ಮುಖ್ಯಸ್ಥ ಶರತ್ ಕಲ್ಯಾಣಿ, ದಿನೇಶ್ ಆಚಾರ್ಯ, ವಿನಯ್, ಶ್ರೀನಾಗ್ ಮತ್ತು ಪಕ್ಷದ ಕಾರ್ಯಕರ್ತರು ಮತ್ತಿತರು ಉಪಸ್ಥಿತರಿದ್ದರು.

ಇದನ್ನು ಒದಿ : https://cnewstv.in/?p=6018

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*