Cnewstv.in / 17.09.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ರಾಜ್ಯದಲ್ಲಿ ಆಡಳಿತ ಕುಸಿದಿದೆ. ಬಿಜೆಪಿಯವರು ಹಿಂದುತ್ವದ ಮುಖವಾಡ ಧರಿಸಿದ್ದಾರೆ. ಇಂತಹ ಕೆಟ್ಟ ಸರ್ಕಾರವನ್ನ ನಾವು ನೋಡೇ ಇಲ್ಲ ಎಂದು ಕೆಪಿಸಿಸಿ ವಕ್ತಾರ ಬೇಲೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ರಾತ್ರೋರಾತ್ರಿ ಕಳ್ಳರ ಹಾಗೆ ಹಿಂದೂ ಪುರಾತನ ದೇವಾಲಯಗಳನ್ನು ಕೆಡವಿದಾಗ ಹಿಂದುತ್ವವಾದಿಗಳು ಎಲ್ಲಿ ಹೋಗಿದ್ದರು ? ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಎಲ್ಲಿ ಹೋಗಿತ್ತು? ಕಾಂಗ್ರೆಸ್ ಸರ್ಕಾರ ಅಥವಾ ಮುಸ್ಲಿಂ ಅಧಿಕಾರಿ ಏನಾದರೂ ಈ ದೇವಾಲಯವನ್ನು ತೆರವು ಮಾಡಿದರೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದರು. ಆದರೆ ಇಂದು ಹಿಂದುತ್ವ ಅಂದರೆ ಕವಚ ಎಂದು ಹೇಳುತ್ತಿದ್ದವರು ಇಂದು ಬಾಯಿ ಮುಚ್ಚಿ ಕುಳಿತಿದ್ದಾರೆ.
ಶೋಭಾ ಮೇಡಂ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿದ್ದಾರೆ. ಎಲ್ಲಾ ವಿಚಾರಕ್ಕೂ ಮಾತಾನಾಡುತ್ತಿದ್ದ ಅವರು ಮೈಸೂರಿನ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಧ್ವನಿಯೆತ್ತಲಿಲ್ಲ. ಸರ್ಕಾರ ಕಣ್ಣುಮುಚ್ಚಿ ಕುಳಿತಿದಿಯಾ ಎಂದು ಪ್ರಶ್ನಿಸಿದರು.
ವಿಡಿಯೋ ವರದಿ
ಇದನ್ನು ಒದಿ : https://cnewstv.in/?p=6003
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv