Breaking News

ತೆರಿಗೆ ನೀಡದೆ ಸಾಗಿಸುತ್ತಿದ್ದ, ಏಳು ಕೋಟಿ ಮೊತ್ತದ ಅಡಿಕೆ ವಶ

Cnewstv.in / 15.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಶಿವಮೊಗ್ಗದಿಂದ ಹೈದರಾಬಾದಿಗೆ ತೆರಿಗೆ ಪಾವತಿಸದೇ ಅಡಿಕೆ ಸಾಗಿಸುತ್ತಿದ್ದ 7 ಲಾರಿಗಳನ್ನು ಹಾಗೂ ಅದರಲ್ಲಿದ್ದ ಏಳು ಕೋಟಿ ಮೊತ್ತದ ಅಡಿಕೆಯನ್ನು ಜಿ‌.ಎಸ್.ಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ವಿಭಾಗ ಕೇಂದ್ರದ ಜಿ.ಎಸ್.ಟಿ ಅಧಿಕಾರಿಗಳು ಹುಬ್ಬಳ್ಳಿ – ನಲಗುಂದ ರಸ್ತೆಯಲ್ಲಿ ತಪಾಸಣೆ ನಡೆಸುವಾಗ ಅಡಿಕೆ ಮೇಲಿನ ತೆರಿಗೆಯನ್ನು (GST) ಪಾವತಿ ಮಾಡದೆ ಶಿವಮೊಗ್ಗದಿಂದ ಹೈದರಾಬಾದಿಗೆ ಅಡಿಕೆಗಳನ್ನು ಮಾರಟ ಮಾಡಲು ಸಾಗಿಸಲಾಗುತ್ತಿತ್ತು. ಅದರೆ ಲಾರಿಗಳ ತಪಾಸಣೆ ಮಾಡಿದಾಗ ಲಾರಿಗಳಲ್ಲಿ ತೆರಿಗೆ ಪಾವತಿ ಮಾಡಿರುವ ರಶೀದಿ ಕೂಡ ಇರಲಿಲ್ಲ. ಆಗ ಅಕ್ರಮವಾಗಿ ತೆರಿಗೆ ನೀಡದೆ ಸಾಗಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನು ಓದಿ : https://cnewstv.in/?p=5946

ಅಡಿಕೆ ಹಾಗೂ ಲಾರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಲಾರಿಯಲ್ಲಿ ಇದ್ದಂತಹ ಏಳುಕೋಟಿ ಮೌಲ್ಯದ ಅಡಿಕೆ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*