Cnewstv.in / 15.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನ ವನ್ನು ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಸೆಪ್ಟಂಬರ್ 17 ರಿಂದ ಆಕ್ಟೊಬರ್ 7 ವರೆಗೆ ಸೇವಾ ಮತ್ತು ಸಮಾರ್ಪಣ ಅಭಿಯಾನ ಎಂಬ 20 ದಿನಗಳ ಸೇವಾ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದರು ಟಿ.ಡಿ.ಮೇಘರಾಜ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಇದನ್ನು ಓದಿ : https://cnewstv.in/?p=5939
ಕಾರ್ಯಕ್ರಮಗಳ ವಿವರ
ಬೆಳಿಗ್ಗೆ 8 ಕ್ಕೆ ಮೋದಿಯವರಿಗೆ ಶುಭವಾಗಲಿ ಎಂದು ಜಿಲ್ಲಾ ಬಿಜೆಪಿ ವತಿಯಿಂದ ಶ್ರೀ ಗಣಪತಿಗೆ ಪೂಜೆ
ಬೆಳಿಗ್ಗೆ 9 ಕ್ಕೆ ಜಿಲ್ಲಾ ಕಾರ್ಯಕಾರಿಣಿ ಸಭೆ
ಬೆಳಿಗ್ಗೆ 10 ಕ್ಕೆ ಶಿವಮೊಗ್ಗ ನಗರ ಯುವಮೋರ್ಚಾ ವತಿಯಿಂದ ರಕ್ತದಾನ ಶಿಬಿರ ಆಯೋಜನೆ.
ಬೆಳಗ್ಗೆ 10.30 ಕ್ಕೆ ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ
ಶುಭಹಾರೈಸುವರೊಂದಿಗೆ, ದೇಶಕ್ಕೆ ಮತ್ತು ದೇಶದ ಜನತೆಗೆ
ಕೈಗೊಂಡ ಕಾರ್ಯಗಳಿಗೆ ಸಮಾಜ ಗಣ್ಯರಿಂದ
ಧನ್ಯವಾದಗಳನ್ನು ತಿಳಿಸುವ
“ಪೋಸ್ಟ್ ಕಾರ್ಡ್” ಅಭಿಯಾನ.

ಬೆಳಗ್ಗೆ 11 ಕ್ಕೆ ಸೇವಾ ಕಾರ್ಯದ ಭಾಗವಾಗಿ ಹಣ್ಣು-ಹಂಪಲು ವಿತರಣೆ.
ಬೆಳಗ್ಗೆ 11.30 ಕ್ಕೆ ಖಾದಿ ಕೇಂದ್ರ ಸ್ಥಾಪನೆ ಮತ್ತು ಖರೀದಿ
ಮಧ್ಯಾಹ್ನ 12.30 ರಿಂದ 2 ರವರೆಗೆ ಸಾಮಾಜಿಕ ಜಾಲತಾಣದ ವತಿಯಿಂದ ಕೇಂದ್ರ ಸರ್ಕಾರದ
ವಿವಿಧ ಜನಪರ ಯೋಜನೆಗಳ ಫಲಾನುಭವಿಗಳ ಹೇಳಿಕೆ
ಮತ್ತು ಇನ್ನೊಗ್ರಾಫಿಕ್ ಅನಾವರಣ.
ಮಧ್ಯಾಹ್ನ 2.30 ರಿಂದ 3.30 ರವರೆಗೆ ಲಸಿಕಾ ಕೇಂದ್ರದ ಸಿಬ್ಬಂಧಿಗೆ(ವಾರಿಯರ್) ಅಭಿನಂದನೆ.
ಮಧ್ಯಾಹ್ನ 3 ಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಕುರಿತು ವಿಚಾರ ಸಂಕಿರಣ.
ಸಂಜೆ 5 ಕ್ಕೆ ಜಲ ಮೂಲ ಸ್ವಚ್ಛತೆ ಮತ್ತು ಗಂಗಾರತಿ.
ಸಂಜೆ 7 ಕ್ಕೆ ಪಂಜಿನ ಮೆರವಣಿಗೆ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv