Cnewstv.in / 14.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕರ್ನಾಟಕದಲ್ಲಿ ಜಾರಿಗೆ ತಂದಿರುವ ಹಿಂದಿ ಕಲಿಯುವ ಭಾಷಾ ಸೂತ್ರವನ್ನು ತಡೆಹಿಡಿಯುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ “ರಾಷ್ಟ್ರೀಯ ಹಿಂದಿ ದಿವಸವನ್ನು” “ಹಿಂದಿ ವಿರೋಧಿ ದಿನ” ವನ್ನಾಗಿ ಆಚರಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಉತ್ತರ ಭಾರತದ ಮೂಲ ಉದ್ದೇಶದ ಅಜೆಂಡಾಗಳನ್ನು ಒಂದೊಂದಾಗಿ ಹೊರಗಟ್ಟಿದೆ, ಆದುದರಿಂದ ಮುಂದಿನ ಸಪ್ಟೆಂಬರ್ 14 ರಂದು ನಡೆಯಲಿರುವ ರಾಷ್ಟ್ರೀಯ ಹಿಂದಿ ದಿವಸ್ ಆಚರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕವು ಹಿಂದಿ ವಿರೋಧಿ ದಿನವನ್ನು ಆಚರಿಸುತ್ತಿದೆ.
ಇದನ್ನು ಓದಿ : https://cnewstv.in/?p=5924
ಜಿಲ್ಲೆಯಾದ್ಯಂತ ಹಿಂದಿ ವಿರೋಧಿ ದಿನದಂದು ಪ್ರತಿಭಟನೆ ನಡೆಸಲಾಗುವುದು, ಮೆರವಣಿಗೆ ಹೊರಟು ಜನರಲ್ಲಿ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಹುನ್ನಾರವನ್ನು ಮನವರಿಕೆ ಮಾಡಿಕೊಟ್ಟು, ಜಾಗೃತಿ ಮೂಡಿಸಲಾಗುವುದು. ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಿಳಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಶಿವಣ್ಣ ಸೂಡೂರು, ಪ್ರಕಾಶ್ ತಮ್ಮಡಿಹಳ್ಳಿ, ಮಂಜುನಾಥ್, ಅವಿನಾಶ್ ಆಯನೂರ್, ಶುಭೋದಯ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv