Breaking News

ಹುಣಸೋಡು ದುರಂತದಲ್ಲಿ ಮೃತಪಟ್ಟ 6ನೇ ವ್ಯಕ್ತಿಯ ಗುರುತು, ಏಳೂವರೆ ತಿಂಗಳ ಬಳಿಕ ಪತ್ತೆ.

Cnewstv.in / 12.09.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಬರೋಬ್ಬರಿ ಏಳುವರೆ ತಿಂಗಳ ಬಳಿಕ ಪತ್ತೆಯಾಗಿದೆ.

21ನೇ ಜನವರಿ 2021ರ ರಾತ್ರಿ ಕಲ್ಲಗಂಗೂರು ಗ್ರಾಮದ ಸರ್ವೆ ನಂಬರ್‌ 2ರ ಜಮೀನಿನಲ್ಲಿರುವ ಎಸ್ಎಸ್ ಕ್ರಷರ್ ಬಳಿ ಭಾರಿ ಪ್ರಮಾಣದ ಸ್ಪೋಟಕ ಸ್ಪೋಟಗೊಂಡಿತ್ತು. ಘಟನೆಯಲ್ಲಿ ಮೃತಪಟ್ಟ 5 ಮಂದಿಯ ಮೃತದೇಹಗಳ ಗುರುತನ್ನು ಅವರ ಸಂಬಂಧಿಕರ ಮೂಲಕ ಪೊಲೀಸರು ಗುರುತಿಸಿ, ಹಸ್ತಾಂತರಿಸಿದ್ದರು. ಆದರೆ 6ನೇ ವ್ಯಕ್ತಿಯ ದೇಹ ಸಂಪೂರ್ಣವಾಗಿ ಛಿದ್ರವಾಗಿತ್ತು ಹಾಗಾಗಿ ಆತನನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ.

ಇದನ್ನು ಓದಿ : https://cnewstv.in/?p=5894

ಮೃತ ದೇಹದ ಭಾಗಗಳನ್ನು ವಶಕ್ಕೆ ಪಡೆದ ಪೊಲೀಸರು, ಅವುಗಳ ಡಿಎನ್ ಎ ಪರೀಕ್ಷೆಗೆ ಬೆಂಗಳೂರು ಮಡಿವಾಳದ ಎಫ್ ಎಸ್ ಎಲ್ ಲ್ಯಾಬ್ ಗೆ ಕಳುಹಿಸಿದರು. ಡಿಎನ್ ಎ ವರದಿ ಬಂದಿದ್ದು, ಮೃತನನ್ನ ಭದ್ರಾವತಿಯ ಕೆ.ಎಚ್ ನಗರದ ಆಟೋ ಚಾಲಕ ಶಶಿ (32) ಎಂದು ಗುರುತಿಸಲಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*