Breaking News

International Literacy Day.. ವಿಶ್ವ ಸಾಕ್ಷರತಾ ದಿನ ಆಚರಣೆ

Cnewstv.in / 08.09.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಸಾಗರ : ಸಾಕ್ಷರತೆ ಮಹತ್ವದ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್ 8 ರಂದು ವಿಶ್ವ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ.

ಸಾಗರ ಪಟ್ಟಣದ ವನಶ್ರೀ ವಸತಿ ಶಾಲೆಯಲ್ಲಿ ಇಂದು ನೆಹರು ಯುವ ಕೇಂದ್ರ ಹಮ್ಮಿಕೊಂಡಿದ್ದ ವಿಶ್ವ ಸಾಕ್ಷರತಾ ದಿನಾಚರಣೆ ಗೆ ವನಶ್ರೀ ವಸತಿ ಶಾಲೆಯ ಸಂಸ್ಥಾಪಕರಾದ ಮಂಜಪ್ಪನವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಿಕ್ಷಣ ಪಡೆಯುವುದರಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಸುತ್ತಲಿನ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸವಾಗಬೇಕು ಅಂತಹ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ನೆಹರು ಯುವ ಕೇಂದ್ರದ ಸ್ವಯಂ ಸೇವಕಿ ಗಾಯತ್ರಿ ಮಾತನಾಡಿ ಸಾಕ್ಷರತೆಯು ವ್ಯಕ್ತಿಯೊಬ್ಬ ಘನತೆಯಿಂದ ಬದುಕಲು ಸಹಾಯ ಮಾಡುವುದರ ಜೊತೆಗೆ ಸ್ವಾವಲಂಬಿಯಾಗಲು ಸಹಕರಿಸುತ್ತದೆ ಕೊರೋನಾ ವೈರಸ್ ನಂತಹ ಸಾಂಕ್ರಾಮಿಕ ರೋಗ ನಡುವೆ ಸಾಕ್ಷರತಾ ದಿನವೂ ಇನ್ನಷ್ಟು ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಶ್ಮಿ, ಗಿರೀಶ್, ವಿದ್ಯಾ, ಶೈಲಜಾ,ಮಧು ಇನ್ನಿತರರು ಹಾಜರಿದ್ದರು.

ಇದನ್ನು ಓದಿ : https://cnewstv.in/?p=5835

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*